ಮಂಜೇಶ್ವರ : ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್ ಗೆ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಹೆಸರಿನಲ್ಲಿ ಹಲವಾರು ಮಂದಿಯಿಂದ ಠೇವಣಿ ಪಡೆದು ಚಿನ್ನ ಮತ್ತು ನಗದು ಹಿಂತಿರುಗಿಸದೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೃಶ್ಯೂರ್ ನಲ್ಲಿ ದಾಖಲಾದ ಆರು ದೂರುಗಳನ್ನು ಹೊರತು ಪಡಿಸಿ ಉಳಿದ ಪ್ರಕರಣಗಳಲ್ಲಿ ಜಾಮೀನು ಲಭಿಸಿದೆ.
ಹೊಸದುರ್ಗ ನ್ಯಾಯಾಲಯ ಬುಧವಾರ ಆರು ಪ್ರಕರಣಗಳಿಗೆ ಜಾಮೀನು ಮಂಜೂರುಗೊಳಿಸಿದ್ದು ಇದರಿಂದ 142 ಪ್ರಕರಣಗಳಲ್ಲೂ ಜಾಮೀನು ಲಭಿಸಿದಂತಾಗಿದೆ. ಈ ಹಿನ್ನಲೆಯಲ್ಲಿ ಶಾಸಕನಿಗೆ ಜೈಲು ಮುಕ್ತಗೊಳ್ಳಲು ಅವಕಾಶ ಲಭಿಸಿದಂತಾಗಿದೆ.
ಕಮರುದ್ದೀನ್ ವಿರುದ್ಧ ತೃಶ್ಯೂರ್ ನಲ್ಲಿ ಆರು ದೂರುಗಳು ದಾಖಲಾಗಿದ್ದು, ಇದರಲ್ಲಿ ಬಂಧನ ದೃಢೀಕರಿಸಿಲ್ಲ. ಹೊಸ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧನ ದೃಢೀಕರಿಸದಿದ್ದಲ್ಲಿ ಶೀಘ್ರ ಕಮರುದ್ದೀನ್ ಜೈಲ್ ನಿಂದ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಮರುದ್ದೀನ್ ಈಗ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Click this button or press Ctrl+G to toggle between Kannada and English