ಪಾಂಡೇಶ್ವರದಲ್ಲಿ ಸುಸಜ್ಜಿತ ಅಗ್ನಿಶಾಮಕ ಕೇಂದ್ರ : ಜೀಜಾ ಮಾಥವನ್ ಹರಿಸಿಂಗ್.

4:49 PM, Monday, October 4th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜೀಜಾ ಮಾಥವನ್ ಹರಿಸಿಂಗ್ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿಮಂಗಳೂರು: 1942ರಲ್ಲಿ ಸ್ಥಾಪಿತವಾದ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರವನ್ನು ಹೊಸ ವಿನ್ಯಾಸದೊಂದಿಗೆ 8 ಅಗ್ನಿಶಾಮಕ ವಾಹನಗಳನ್ನು ಇರಿಸುವಂತೆ ಇನ್ನು ಒಂದು ವರ್ಷದೊಳಗೆ ನವೀಕರಿಸಲಾಗುವುದು ಎಂದು ರಾಜ್ಯ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಗ್ನಿಶಾಮಕ ದಳ ಬೆಂಗಳೂರು ಇವರು ಹೇಳಿದರು.

ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಜೀಜಾ ಮಾಥವನ್ ಹರಿಸಿಂಗ್ ಭೇಟಿ
ಅವರು ಕದ್ರಿ ಅಗ್ನಿ ಶಾಮಕ ಕೇಂದ್ರಕ್ಕೆ ಬೇಟಿ ನೀಡಿದ ಬಳಿಕ, ಪಾಂಡೇಶ್ವರ ಅಗ್ನಿ ಶಾಮಕ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಗೌರವವಂದನೆ ಸ್ವೀಕರಿಸಿದ ಬಳಿಕ ಅಗ್ನಿ ಶಾಮಕ ಕೇಂದ್ರದ ಪರಿಶೀಲನೆ ನಡೆಸಿದರು.

ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಜೀಜಾ ಮಾಥವನ್ ಹರಿಸಿಂಗ್ ಭೇಟಿ
ಮಂಗಳೂರಿಗೆ ಸಕಲ ವ್ಯವಸ್ಥೆಗಳಿರುವ, 8 ಅಗ್ನಿಶಾಮಕ ವಾಹನಗಳಿಗೆ ಸ್ಥಳಾವಾಕಾಶವಿರುವ ಮತ್ತು ಚೀಫ್ ಫೈರ್ ಆಫೀಸರ್ ಮತ್ತು ರೀಜನಲ್ ಫೈರ್ ಆಫಿಸರ್ ಗಳಿರುವ ಕೇಂದ್ರವನ್ನು ಒಂದು ವರ್ಷದ ಓಳಗೆ ನಿರ್ಮಿಸಲಾಗುವುದು, ನಗರದಲ್ಲಿ ರಸ್ತೆ ಅಗಲೀಕರಣ ಸಮಸ್ಯೆಗಳಿರುವುದರಿಂದ ತಾತ್ಕಾಲಿಕವಾಗಿ ಹೊಸ ಕೇಂದ್ರದ ಶಿಲಾನ್ಯಾಸವನ್ನು ಹಿಂದೆ ಹಾಕಲಾಗಿತ್ತು ಎಂದು ಜೀಜಾ ಮಾಥವನ್ ಹೇಳಿದರು. ಬಳಿಕ ಅವರು ಮೇರಿಹಿಲ್ ನಲ್ಲಿರುವ ಹೋಮ್ ಗಾರ್ಡ್ಸ್ ಕಛೇರಿಗೆ ಭೇಟಿ ನೀಡಿದರು.

ಜೀಜಾ ಮಾಥವನ್ ಹರಿಸಿಂಗ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English