ಶಾರದಾ ಆಯುರ್ವೇದ ಆಸ್ಪತ್ರೆಯ ‘ಸಂಪೂರ್ಣ’ ಲೈಂಗಿಕ ಆರೋಗ್ಯ ಮತ್ತು ಫರ್ಟಿಲಿಟಿ ಕೇಂದ್ರ ಲೋಕಾರ್ಪಣೆ

12:16 AM, Sunday, February 14th, 2021
Share
1 Star2 Stars3 Stars4 Stars5 Stars
(No Ratings Yet)
Loading...

sharadha ತಲಪಾಡಿ : ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ಲೈಂಗಿಕ ಆರೋಗ್ಯ ಮತ್ತು ಸಂತಾನಶಕ್ತಿ ವಿಭಾಗ ‘ಸಂಪೂರ್ಣ’ವನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು. ಈ ಕೇಂದ್ರದಲ್ಲಿ ನುರಿತ ಸ್ತ್ರೀ ಹಾಗೂ ಪುರುಷ ತಜ್ಞ ಆಯುರ್ವೇದ ವೈದ್ಯರ ಸೇವೆ ಲಭ್ಯವಿರಲಿದೆ. ಪುರುಷ ಹಾಗೂ ಸ್ತ್ರೀಯರ ವಿವಾಹ ಪೂರ್ವ ಲೈಂಗಿಕ ಸಮಾಲೋಚನೆ, ಗರ್ಭಧಾರಣೆಗೆ ಅವಶ್ಯಕವಾದ ದೈಹಿಕ, ಮಾನಸಿಕ ಮತ್ತು ಸಾಂಸಾರಿಕ ವಾತಾವರಣ ಹಾಗೂ ಲೈಂಗಿಕ ವಿಜ್ಞಾನದ ವೈದ್ಯಕೀಯ ಮಾಹಿತಿಯನ್ನು ಸಮಾಲೋಚನೆಯ ಮೂಲಕ ಪಡೆಯಬಹುದು. ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಲೈಂಗಿಕ ತೊಂದರೆಗಳಾದ ನಿಮಿರು ದೌರ್ಬಲ್ಯ, ಶೀಘ್ರಸ್ಖಲನ, ಸ್ವಪ್ನಸ್ಖಲನ, ಮೂತ್ರದಲ್ಲಿ ವೀರ್ಯಸ್ಖಲನ, ಪುರುಷರಲ್ಲಿ ಬಂಜೆತನ, ಹತಾಶೆ ಇತ್ಯಾದಿಗಳಿಗೆ ಸೂಕ್ತ ಸಲಹೆ, ತಪಾಸಣೆ, ಆಯುರ್ವೇದ ಔಷಧಿ ಮತ್ತು ಪಂಚಕರ್ಮ ಚಿಕಿತ್ಸೆಗಳು ಲಭ್ಯವಿವೆ. ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಸಮಸ್ಯೆ, ಮುಟ್ಟಿನ ತೊಂದರೆ, ಪಿಸಿಓಡಿ, ಬಂಜೆತನ, ಹತಾಶೆ, ಗರ್ಭಿಣಿಯರ ತಪಾಸಣೆ ಮತ್ತುಆರೈಕೆ, ಹೆರಿಗೆ ಸಂಬಂಧಿ ಸೇವೆಗಳು, ಮಕ್ಕಳು ಮತ್ತು ತಾಯಂದಿರ ಆರೋಗ್ಯವರ್ಧನೆಗಾಗಿ ಆಯುರ್ವೇದ ಚಿಕಿತ್ಸೆಗಳು ಲಭ್ಯವಿರುತ್ತವೆ.

sharadha ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಮಣಿಪಾಲದ ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಮಾತನಾಡಿ ಆಯುರ್ವೇದದಲ್ಲಿ ಉಲ್ಲೇಖವಾದ ವಾಜೀಕರಣದ ಸಂಪೂರ್ಣ ಉಪಯೋಗವನ್ನು ಜನರಿಗೆ ತಲುಪಿಸುವ ಕಾರ್ಯ ಈ ಕೇಂದ್ರದ ಮೂಲಕ ನಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ ಬಿ ಪುರಾಣಿಕ್ ಮಾತನಾಡಿ ಸದೃಢ ದೇಶಕ್ಕಾಗಿ ಉತ್ತಮ ಪ್ರಜೆಗಳ ಅವಶ್ಯಕತೆ ಇದ್ದು ಈ ‘ಸಂಪೂರ್ಣ’ ಕೇಂದ್ರದ ಮೂಲಕ, ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಲೈಂಗಿಕ ಆರೋಗ್ಯವನ್ನು ಪಡೆದು, ಸಂಸ್ಕಾರವಂತ ಸಂತಾನವನ್ನು ಪಡೆಯಲು ತಜ್ಞ ವೈದ್ಯರಿಂದ ಸೂಕ್ತ ಸಲಹೆ, ತಪಾಸಣೆ ಮತ್ತು ಚಿಕಿತ್ಸೆ ದೊರೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ರವಿಗಣೇಶ್ ಮೊಗ್ರ ಸ್ವಾಗತಿಸಿದರು. ಡಾ. ಶ್ರವ್ಯ ಪ್ರಾರ್ಥನೆ ನೆರವೇರಿಸಿ, ಡಾ. ಶಶಾಂಕ್ ವಂದಿಸಿದರು. ರೋಗನಿದಾನ ವಿಭಾಗದ ಮುಖ್ಯಸ್ಥ ಡಾ. ಅಜಂತ, ಕೇಂದ್ರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ, ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ನಿರ್ದೇಶಕರಾದ ಸಮೀರ್ ಪುರಾಣಿಕ್, ಆಡಳಿತ ಅಧಿಕಾರಿ ವಿವೇಕ್ ತಂತ್ರಿ, ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ರಾಜೇಶ್ ಪಾದೇಕಲ್, ಸಂಸ್ಥೆಗಳ ವೈದ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

sharadha ಇದೇ ಸಂದರ್ಭದಲ್ಲಿ ದೇವಿನಗರದಲ್ಲಿರುವ ಶಾರದಾ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಿಗೆ ಆರೋಗ್ಯ ತಪಾಸಣೆ/ ಚಿಕಿತ್ಸೆಗಾಗಿ ಬರುವವರ ಅನುಕೂಲಕ್ಕಾಗಿ, ಆಸ್ಪತ್ರೆಯಿಂದ ಮುಖ್ಯರಸ್ತೆಯನ್ನು ಸಂಪರ್ಕಿಸುವ ಕೆಸಿ ರೋಡ್ ನಡುವೆ ಉಚಿತ ಬಸ್ ಸೇವೆಯನ್ನು ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಆಸ್ಪತ್ರೆಯಿಂದ ಬೆಳಿಗ್ಗೆ ಗಂಟೆಗೊಂದರಂತೆ 10.45, 11.45, 12.45 ಗಂಟೆಗಳಿಗೆ ಬಸ್ಸಿನ ವ್ಯವಸ್ಥೆಯಿದ್ದರೆ, ಕೆಸಿ ರೋಡಿನಿಂದಲೂ ಬೆಳಿಗ್ಗೆಯಿಂದ 10.00, 11.00, 12.00 ಗಂಟೆಗಳಿಗೆ ಬಸ್ಸಿನ ವ್ಯವಸ್ಥೆ ರಜಾದಿನಗಳನ್ನು ಹೊರತುಪಡಿಸಿ ಲಭ್ಯವಿರುತ್ತದೆ. ವಿವರಗಳಿಗೆ ಆಸ್ಪತ್ರೆಯ ಫೋನ್: 8971153232 / 6363926599 ಗೆ ಸಂಪರ್ಕಿಸಬಹುದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English