ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಶೈಲಜಾ ಜೆ. ಶೆಟ್ಟಿ

5:56 PM, Wednesday, February 17th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Shailaja ಮಂಗಳೂರು : ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ಸಿನ ಶೈಲಜಾ ಜೆ. ಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ  ನವಾಜ್ ಕಲ್ಲರಕೋಡಿ ಚುನಾಯಿತರಾಗಿದ್ದಾರೆ.

ನರಿಂಗಾನ ಗ್ರಾಮ ಪಂಚಾಯತಿನ ಎಲ್ಲಾ 17 ವಾರ್ಡು ಗಳಲ್ಲಿ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಪಂಚಾಯತಿನಲ್ಲಿ ವಿರೋಧ ಪಕ್ಷವಿರುವುದಿಲ್ಲ.

ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮುಡಿಪು ಬ್ಲಾಕ್ ಕಾಂಗ್ರೆಸ್ಸಿನ ಪ್ರಶಾಂತ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ಬುಲ್ ಜಲೀಲ್ ಮೋಟುಗೋಳಿ, ಉಪಾಧ್ಯಕ್ಷ ಜೋಸೆಫ್ ಕುಟಿನಾ, ನರಿಂಗಾನ ಕಾಂಗ್ರೆಸ್ಸ್ ಉಸ್ತುವಾರಿ ಅಬೂಬಕ್ಕರ್ ಸಿದ್ದೀಕ್ ಪಾರೆ, ವಲಯ ಅಧ್ಯಕ್ಷ ಹನೀಪ್ ಚಂದ ಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು.

Shailaja

ಚುನಾವಣಾಧಿಕಾರಿಯಾಗಿ ನೋಣಯ ನಾಯ್ಕ್, ಪಿಡಿಒ ರಜನಿ, ಕಾರ್ಯದರ್ಶಿ ನಳಿನಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

Shailaja

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English