ಬ್ರಹತ್ ಗಾತ್ರದ ಮರ ಬಿದ್ದು ಮೂವರು ಯುವಕರ ದಾರುಣ ಸಾವು

12:40 AM, Wednesday, March 10th, 2021
Share
1 Star2 Stars3 Stars4 Stars5 Stars
(No Ratings Yet)
Loading...

patrameಧರ್ಮಸ್ಥಳ :  ಖಾಸಗಿ ಸ್ಥಳವೊಂದರಲ್ಲಿ ಮರ ಕಡಿಯುತ್ತಿದ್ದ ವೇಳೆ  ಆಕಸ್ಮಿಕವಾಗಿ ಬ್ರಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ  ಮೂವರು ಯುವಕರು ಧಾರುಣವಾಗಿ ಮೃತಪಟ್ಟ ಘಟನೆ  ಮಂಗಳವಾರ  ಮಧ್ಯಾಹ್ನ ಪಟ್ರಮೆ ಗ್ರಾಮದ ಅನಾರು ಸಮೀಪ ಕಾಯಿಲ ಎಂಬಲ್ಲಿ ನಡೆದಿದೆ.

ಪಟ್ರಮೆ ಗ್ರಾಮದ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್ ಕುಂಬಾರ (21), ಸೇಸಪ್ಪ ಪೂಜಾರಿಯವರ ಮಗ ಸ್ವಸ್ತಿಕ್ ಪೂಜಾರಿ ಮತ್ತು ಗಣೇಶ್ ಉಪ್ಪಿನಂಗಡಿ ಮೃತಪಟ್ಟವರು.

ಪಟ್ರಮೆ ಗ್ರಾಮದ ಅನಾರು ಸಮೀಪ ಕಾಯಿಲ ಎಂಬಲ್ಲಿ ಲೋಕಯ್ಯ ಗೌಡರಿಗೆ ಸೇರಿದ  ಧೂಪದ ಮರವೊಂದನ್ನು ಕಡಿದುರುಳಿಸುವ ಸಂದರ್ಭ ಮರ ಯುವಕರ ಮೇಲೆ ಬಿದ್ದು ಈ ಅವಘಡ ಸಂಭವಿಸಿದೆ.

ಈ ಸಂಬಂಧ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಪವನ್ ಕುಮಾರ್, ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English