ಉಳ್ಳಾಲ : ಮಾಡೆಲಿಂಗ್ ಯುವತಿ, ಪೋಟೋ ಶೂಟ್ ನಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದವಳು ಕುಂಪಲದ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಮೃತ ಯುವತಿಯನ್ನು ಆಶ್ರಯ ಕಾಲನಿ ನಿವಾಸಿ ಎಚ್ಪಿ ಗ್ಯಾಸ್ ಏಜನ್ಸಿಯಲ್ಲಿ ಕಾರ್ಮಿಕರಾಗಿರುವ ಚಿತ್ತಪ್ರಸಾದ್ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವನಿತಾ ದಂಪತಿಯ ಕಿರಿಯ ಪುತ್ರಿ ಪ್ರೇಕ್ಷಾ (17) ಎಂದು ಗುರುತಿಸಲಾಗಿದೆ.
ಮಂಗಳೂರು ನಂತೂರು ಬಳಿಯ ನಿಟ್ಟೆ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ಪ್ರೇಕ್ಷಾಳ ಅಕ್ಕ ಪ್ರತೀಕ್ಷಾ ಕಾಲೇಜಿಗೆ ತೆರಳಿದ್ದಳು. ಹೀಗಾಗಿ ತಂಗಿ ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ಸ್ಥಳೀಯ ಮಹಿಳೆಯೋರ್ವಳಿಗೆ ಘಟನೆ ಗೊತ್ತಾಗಿದ್ದು ಪ್ರೇಕ್ಷಾ ಬಗ್ಗೆ ಆಕೆಯ ತಾಯಿಗೆ ಮಾಹಿತಿ ನೀಡಿದ್ದಾರೆ.
ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಗೆ ಮೂವರು ಬಂದು ಹೋಗಿದ್ದರು ಎನ್ನಲಾಗಿದೆ. ಮಧ್ಯಾಹ್ನ ವೇಳೆ ಕೋಣೆಯೊಳಗೆ ಪ್ರೇಕ್ಷಾಳ ಮೃತದೇಹ ಬೆಡ್ಡಿನ ಮೇಲೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಬಿಗಿದು ಕುಳಿತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಸ್ಥಳೀಯರಾದ ಸೌರವ್, ಯತೀರಾಜ್, ಭವಿತ್ ಎಂಬ ಮೂವರು ಯುವಕರು ಪ್ರೇಕ್ಷಾಳ ಮನೆ ಕಡೆಗೆ ಸ್ಕೂಟರಲ್ಲಿ ಬಂದಿರುವುದನ್ನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೋರ್ವ ಸ್ಥಳೀಯ ಯುವಕನ ಬಗ್ಗೆಯೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭವಿತ್ ಸ್ಥಳೀಯ ಕಾಂಗ್ರೆಸ್ ಮುಖಂಡನ ಮಗನಾಗಿದ್ದು ಗಾಂಜಾ ವ್ಯಸನಿಯಾಗಿದ್ದ.
ಸ್ಥಳೀಯರು ಕೊಲೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದು. ಮನೆಗೆ ಬಂದು ಹೋದವರ ಮೇಲೆ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English