ಟ್ಯಾಂಕರ್ ಪಲ್ಟಿ : ಬಾಟಲ್, ಕ್ಯಾನ್, ಬಕೆಟ್​ಗಳಲ್ಲಿ ಪುಕ್ಸಟ್ಟೆ ಡೀಸೆಲ್ ತುಂಬಿಸಿ ಕೊಂಡ ಜನ

11:18 PM, Saturday, March 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tankerಉಪ್ಪಿನಂಗಡಿ:  ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿದ್ದ  ಡೀಸೆಲ್ ತುಂಬಿದ್ದ ಟ್ಯಾಂಕರ್ ಮಗುಚಿ ಬಿದ್ದು ಡೀಸೆಲ್ ಸೋರಿಕೆಯಾದ ಘಟನೆ ಶನಿವಾರ  ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಡೀಸೆಲ್ ಟ್ಯಾಂಕರ್ ಚಾಲಕ ಮಹೇಶ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಟ್ಯಾಂಕರ್ ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿತ್ತು, ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದರಿಂದ ಸ್ವಲ್ಪ ಸಮಯ ಸಂಚಾರಕ್ಕೆ ಅಡ್ಡಿಯಾಗಿತ್ತು.

ಟ್ಯಾಂಕರ್ ಮಗುಚಿ ಬಿದ್ದ ಸಮಯದಲ್ಲಿ ಸ್ಥಳೀಯರು ಹಾಗೂ ಇತರೆ ವಾಹನ ಚಾಲಕರು ಬಾಟಲ್, ಕ್ಯಾನ್, ಬಕೆಟ್ಗಳಲ್ಲಿ ಡೀಸೆಲ್ ತುಂಬಿಸಲು ಮುಂದಾಗಿದ್ದರು. ಪರಿಣಾಮ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಡೀಸೆಲ್ ತುಂಬಿಸುತ್ತಿದ್ದ ಸ್ಥಳೀಯರಿಗೆ, ವಾಹನ ಚಾಲಕರಿಗೆ ಲಘುವಾಗಿ ಲಾಠಿ ಬೀಸುವ ಮೂಲಕ ಗುಂಪು ಚದುರಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಚರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English