ಬಂಟ್ವಾಳ : ಶಿಸ್ತುಬದ್ಧ ಕ್ರೀಡೆಯಲ್ಲಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಚೆಗೆ ಅಸ್ಸಾಂ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಾವಲಿನ್ ಎಸೆತ ಪಂದ್ಯಾಟದಲ್ಲಿ ಇಲ್ಲಿನ ವಿದ್ಯಾಥರ್ಿನಿ ರಮ್ಯಶ್ರೀ ಜೈನ್ ಚಿನ್ನದ ಪದಕ ಗಳಿಸಿರುವುದು ಇದಕ್ಕೆ ಸೂಕ್ತ ಉದಾಹರಣೆ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು.
ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಸಂಸ್ಥಾಪಕ, ಮನ್ ದೇವ್ ಎಜುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರಳ ಓಂ ಜನಹಿತಾಯ ವಿದ್ಯಾಲಯ ಸಂಚಾಲಕ ರಂಜನ್ ಕುಮಾರ್ ಶೆಟ್ಟಿ ಕ್ರೀಡಾಂಗಣ ಉದ್ಘಾಟಿಸಿದರು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಶುಭ ಹಾರೈಸಿದರು. ಕ್ರೀಡಾ ತರಬೇತುದಾರ ಪ್ರೇಮನಾಥ ಶೆಟ್ಟಿ ಮೂಡುಬಿದ್ರೆ, ಗ್ರಾ.ಪಂ.ಸದಸ್ಯರಾದ ಉದಯ ಕುಮಾರ್ ಸಿದ್ಧಕಟ್ಟೆ, ಚಂದ್ರ ಪೂಜಾರಿ ಕೋರ್ಯಾರು, ಎಂಜಿನಿಯರ್ ವಿಷ್ಣುಪ್ರಸಾದ್, ಉದ್ಯಮಿ ದುಗರ್ಾದಾಸ ಶೆಟ್ಟಿ ಕರೆಂಕಿಜೆ, ಶಾಲಾ ಸಂಚಾಲಕ ರಾಧಾಕೃಷ್ಣ ಆಳ್ವ ಅಡ್ಯಾರು, ವಿಜಯ ಕುಮಾರ್ ಚೌಟ ಸಿದ್ಧಕಟ್ಟೆ, ಕೃಷಿಕ ರವೀಂದ್ರ ಜೈನ್, ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೋ, ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ ಶೆಟ್ಟಿ, ಸತೀಶ್ ಮತ್ತಿತರರು ಇದ್ದರು.
ಪ್ರಾಂಶುಪಾಲೆ ಲಾವಣ್ಯ ಕರ್ಪೆ ಸ್ವಾಗತಿಸಿ, ಉಪನ್ಯಾಸಕಿ ದೀಕ್ಷಾ ವಂದಿಸಿದರು. ಆಶಿಕಾ ಫರ್ಝಾನ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English