ದಾಂಪತ್ಯದಲ್ಲಿ ವಿರಸ : ಮಕ್ಕಳಿಬ್ಬರ ಜೊತೆ ತಂದೆ ಆತ್ಮಹತ್ಯೆ

7:46 PM, Wednesday, March 17th, 2021
Share
1 Star2 Stars3 Stars4 Stars5 Stars
(No Ratings Yet)
Loading...

Chervathuruಕಾಸರಗೋಡು : ದಾಂಪತ್ಯದಲ್ಲಿ ವಿರಸ ಮೂಡಿ ಇಬ್ಬರು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಿಕ್ಷಾ ಚಾಲಕ ಮಕ್ಕಳಿಗೆ ವಿಷವುಣಿಸಿ ನಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಚೆರ್ವತ್ತೂರಿನಲ್ಲಿ ನಡೆದಿದೆ.

ಪಿಲಿಕ್ಕೋಡು ಮಡಿವಾಯಿಯ ಆಟೋರಿಕ್ಷಾ ಚಾಲಕ ರೂಪೇಶ್ (37) ಮತ್ತು ಮಕ್ಕಳಾದ ವೈದಹಿ (10) , ಶಿವಾನಂದ (6) ಮೃತಪಟ್ಟವರು. ಅವರ ಮೃತದೇಹ ನಿರ್ಮಾಣ ಹಂತದಲ್ಲಿರುವ ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿವೆ.

ಮಕ್ಕಳಿಬ್ಬರು ವಿಷ ಸೇವನೆಯಿಂದ ಮೃತಪಟ್ಟರೆ ರೂಪೇಶ್ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ . ಮಕ್ಕಳಿಗೆ ವಿಷ ವುಣಿಸಿ ಬಳಿಕ ಆತ್ಮಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ.

ರೂಪೇಶ್ ಅವರು ಕಾಞ೦ಗಾಡ್ ನ ಸವಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ದಾಂಪತ್ಯದಲ್ಲಿ ವಿರಸ ಮೂಡಿ ಇಬ್ಬರು ಬೇರೆ ಬೇರೆ ವಾಸವಾಗಿದ್ದರು ಎನ್ನಲಾಗಿದೆ . ಇಬ್ಬರು ಮಕ್ಕಳು ತಂದೆ ಜೊತೆ ವಾಸವಾಗಿದ್ದರು . ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಚಂದೇರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English