ಕಾಲೇಜಿಗೆ ಹೋಗು ಎಂದಿದ್ದಕ್ಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ

7:32 PM, Thursday, March 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

Divya ಚಾಮರಾಜನಗರ: ಲಾಕ್‍ಡೌನ್ ಬಳಿಕ ಮನೆಯಲ್ಲೇ ಇದ್ದ ಮಗಳನ್ನು ಕಾಲೇಜಿಗೆ ಹೋಗು ಎಂದು ಬಲವಂತ ಮಾಡಿದ್ದಕ್ಕೆ ಮನನೊಂದ ಯುವತಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

ಕೊಳ್ಳೇಗಾಲದ ಮೇಗಲದೊಡ್ಡಿ ಗ್ರಾಮದ ಲೂರ್ಧಸ್ವಾಮಿ ಅವರ ಮಗಳು ದಿವ್ಯಾ(19) ಮೃತ ದುರ್ದೈವಿ.

ಈಕೆ ಕಳೆದ ವರ್ಷ ಕೊರೊನಾ ಹಿನ್ನೆಲೆ ಲಾಕ್‍ಡೌನ್ ನಿಂದ ಕಾಲೇಜಿಗೆ ಹೋಗದೆ ಕೂಲಿ ಕೆಲಸ ಮಾಡಿಕೊಂಡಿದ್ದಳು. ಆದರೆ ಕಾಲೇಜು ಆರಂಭವಾದ ಬಳಿಕ ಓದಲು ಹೋಗು ಎಂದು ಪೋಷಕರು ಬಲವಂತ ಮಾಡಿ ಕಾಲೇಜಿಗೆ ಕಳುಹಿಸಿದ್ದರು. ಕಾಲೇಜಿಗೆ ಹೋಗಲು ಇಷ್ಟವಿಲ್ಲದ ಕಾರಣ ದಿವ್ಯಾ ಇಂದು ಕ್ರಿಮಿನಾಶಕವನ್ನು ಸೇವಿಸಿದ್ದಾಳೆ.

ಕ್ರಿಮಿನಾಶಕ ಕುಡಿದು ನರಳುತ್ತಿದ್ದ ಮಗಳನ್ನು ನೋಡಿದ ಪೋಷಕರು, ತಕ್ಷಣ ಕೊಳ್ಳೇಗಾಲ ಉಪ ವಿಭಾಗ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English