ಭಾರತದ ಸೆಕ್ಯೂಲರ್ ಗಳು ನೇಪಾಳದ ಮುಸಲ್ಮಾನರನ್ನ ನೋಡಿ ಕಲಿಯುವುದು ಬಹಳಷ್ಟಿದೆ !

11:06 PM, Friday, March 19th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Nepalಕಾಟ್ಮಾಂಡು : ಭಾರತವನ್ನೇನಾದರೂ ಹಿಂದೂ ರಾಷ್ಟ್ರವೆಂದು ಘೋಷಿಸುವ ಬಗ್ಗೆ ಮಾತನಾಡಿದರೆ ಸಾಕು ಭಾರತದಲ್ಲಿ ಭೂಕಂಪವಾಗಿ ಲಕ್ಷಾಂತರ, ಕೋಟ್ಯಾಂತರ ಜನ ಸತ್ತೇ ಹೋಗಿಬಿಡುತ್ತಾರೆ ಅನ್ನೋ ರೀತಿಯಲ್ಲಿ ಭಾರತದ ಬುದ್ಧಿಜೀವಿಗಳು, ಸೆಕ್ಯೂಲರ್ ಗಳು ಬೊಬ್ಬೆಯಿಡೋಕೆ ಶುರು ಮಾಡುತ್ತಾರೆ. ಆದರೆ ನೇಪಾಳದ ಮುಸಲ್ಮಾನರ ಪ್ರಕಾರ ಅವರಿಗೆ ಹಿಂದೂ ರಾಷ್ಟ್ರವೇ ಹೆಚ್ಚು ಸುರಕ್ಷಿತವೆಂಬ ಭಾವನೆ ಮೂಡಿತ್ತಿದೆಯಂತೆ.

ನೇಪಾಳದ ಮುಸಲ್ಮಾನರು ಕೇವಲ ಹಿಂದೂ ರಾಷ್ಟ್ರಕ್ಕಾಗಿ ಸಮರ್ಥನೆಯನ್ನಷ್ಟೇ ನೀಡಿದ್ದಲ್ಲದೆ ನೇಪಾಳವನ್ನ ಮತ್ತೆ ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಹಿಂದೂ ರಾಷ್ಟ್ರಕ್ಕೆ ಸಂಬಂಧಿಸಿದ ಅಭಿಯಾನದ ಕುರಿತಾಗಿ ಅವರು ಹೇಳುವುದೇನೆಂದರೆ ಒಂದು ರಾಷ್ಟ್ರ ಸೆಕ್ಯೂಲರ್ ರಾಷ್ಟ್ರವಾಗಿಬಿಟ್ಟರೆ ಅದಕ್ಕೂ ಹಾಗು ಹಿಂದೂ ರಾಷ್ಟ್ರಕ್ಕೆ ಹೋಲಿಸಿದಾಗ ಹಿಂದೂ ರಾಷ್ಟ್ರದಲ್ಲೇ ತಾವು (ಮುಸಲ್ಮಾನರು) ಹೆಚ್ಚು ಸುರಕ್ಷಿತರಾಗಿರುತ್ತಾರೆ ಎಂದು ಹೇಳಿದ್ದಾರೆ.

ನೇಪಾಳದ ಮುಸ್ಲಿಂ ಮಂಚ್ ನ ಪ್ರಮುಖರಾದ ಅಮಜದ್ ಅಲಿ ಮಾತನಾಡುತ್ತ “ಇಸ್ಲಾಂ ಸುರಕ್ಷಿತವಾಗಿರಬೇಕೆಂದರೆ ನೇಪಾಳ ಮತ್ತೆ ಹಿಂದೂ ರಾಷ್ಟ್ರವಾಗಬೇಕು. ನಾನು ಇಂತಹದ್ದೊಂದು ಬೇಡಿಕೆಯಿಡುತ್ತಿರೋದಕ್ಕೆ ಮುಖ್ಯ ಕಾರಣವೇನೆಂದರೆ ನಮ್ಮ ಧರ್ಮ(ಇಸ್ಲಾಂ) ಸುರಕ್ಷಿತವಾಗಿರಲು ಹಿಂದೂ ರಾಷ್ಟ್ರ ಮಾತ್ರ ಸೂಕ್ತ. ಯಾವಾಗ ನೇಪಾಳ ಹಿಂದೂ ರಾಷ್ಟ್ರವಾಗಿತ್ತೋ ಆಗ ನಾವು ಹೆಚ್ಚು ಸುರಕ್ಷಿತರೆಂಬ ಭಾವನೆಯಿತ್ತು. ಆದರೆ ನೇಪಾಳ ಸೆಕ್ಯೂಲರ್ ರಾಷ್ಟ್ರವೆಂದು ಘೋಷಣೆಯಾದ ಬಳಿಕ ನಮಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ. ನೇಪಾಳ ಮತ್ತೆ ಹಿಂದೂ ರಾಷ್ಟ್ರವಾಗಲೇಬೇಕು” ಎಂದು ಹೇಳಿದ್ದಾರೆ.

ಸಿಪಿಎನ್-ಯೂಎಮ್‌ಎಲ್ ನ ಸದಸ್ಯರಾದ ಅನಾರಕಲಿ ಮಿಯಾ ರವರು ಮಾತನಾಡುತ್ತ ಅವರು ಹೇಳುವಂತೆ ನೇಪಾಳ ಸೆಕ್ಯೂಲರ್ ರಾಷ್ಟ್ರವಾದ ಬಳಿಕ ನೇಪಾಳದಲ್ಲಿ ಕ್ರೈಸ್ತ ಮಿಷನರಿಗಳು ನೇಪಾಳಿಗರನ್ನ ಮತಾಂತರಿಸುವ ಕೆಲಸಕ್ಕೆ ಹೆಚ್ಚು ಬಲ ಬಂದಿದೆ ಎಂದು ತಿಳಿಸಿದ್ದಾರೆ. ಮುಂದೆ ಅವರು ಮಾತನಾಡುತ್ತ “ನನ್ನ ಪ್ರಕಾರ ಹೇಳುವುದಾದರೆ ನೇಪಾಳ ಸೆಕ್ಯೂಲರಿಸಂ ನ್ನ ತನ್ನದಾಗಿಸಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು, ಈ ನಡೆ ನೇಪಾಳಕ್ಕೆ ಭವಿಷ್ಯದಲ್ಲಿ ಭಾರೀ ಅನಾಹುತವನ್ನೇ ತಂದಿಡಲಿದೆ” ಎಂದಿದ್ದಾರೆ.

ಯೂಸಿಪಿಎನ್(ಮಾವೋವಾದಿ) ಸಂಘಟನೆಯ ಸಹಯೋಗದಲ್ಲಿ ಮುಸ್ಲಿಂ ಮುಕ್ತಿ ಮೋರ್ಚಾದ ಪ್ರಮುಖರಾದ ಉದಬುದ್ದಿನ್ ರವರು ಕೂಡ ನೇಪಾಳದಲ್ಲಿ ಹೆಚ್ಚುತ್ತಿರುವ ಕ್ರಿಶ್ಚಿಯನ್ ಮಿಷನರಿಗಳ ಪ್ರಭಾವವನ್ನ ಒಪ್ಪಿಕೊಂಡಿದ್ದಾರೆ. ರಾಷ್ಟ್ರವಾದಿ ಮುಸ್ಲಿಂ ಮಂಚ್ ನ ನೇಪಾಳಗಂಜ್ ನ ಪ್ರಮುಖರಾದ ಬಾಬು ಖಾನ್ ಪಠಾಣ್ ರವರು ಹೀಗೆ ಹೇಳ್ತಾರೆ “ದೇಶವನ್ನ ಸೆಕ್ಯೂಲರ್ ರಾಷ್ಟ್ರ ಮಾಡುವುದರಿಂದ ಹಿಂದೂ ಮುಸ್ಲಿಂರಲ್ಲಿನ ಐಕ್ಯತೆಗೆ ಧಕ್ಕೆ ಬಂದು ಇಬ್ಬರಲ್ಲೂ ವೈಮನಸ್ಸು ಮೂಡುವುದು.‌ ಹೀಗಾಗಿ ನೇಪಾಳ ಹಿಂದಿನಂತೆ ಹಿಂದೂ ರಾಷ್ಟ್ರವೆಂದೇ ಘೋಷಿಸಬೇಕು” ಎಂದಿದ್ದಾರೆ

ನಿಮಗೆ ಇಲ್ಲಿ ತಿಳಿಸಲೇಬೇಕಾದ ವಿಚಾರವೇನೆಂದರೆ ರಾಜನೇ ರಾಷ್ಟ್ರವನ್ನ ಆಳಬೇಕು ಹೊರತು ರಾಜಕಾರಣಿಗಳಲ್ಲ ಎಂಬುದರ ಸಮರ್ಥಕರಾದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಹಾಗು ಹಲವಾರು ಹಿಂದೂ ಸಂಘಟನೆಗಳು ನೇಪಾಳವನ್ನ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ದೊಡ್ಡ ಅಭಿಯಾನವನ್ನೇ ನಡೆಸುತ್ತಿವೆ. ಇದಕ್ಕೆ ಕಾರಣವೇನೆಂದರೆ ಕೆಪಿ ಓಲಿ ಶರ್ಮಾ ನೇಪಾಳದ ಪ್ರಧಾನಮಂತ್ರಿಯಾದ ಬಳಿಕ ನೇಪಾಳದಲ್ಲಿ ನಿರ್ಮಿತವಾದ ಹೊಸ ಸಂವಿಧಾನದಲ್ಲಿ ನೇಪಾಳವನ್ನ ಹಿಂದೂ ರಾಷ್ಟ್ರದಿಂದ ಸೆಕ್ಯೂಲರ್ ರಾಷ್ಟ್ರವೆಂದು ಬದಲಾಯಿಸಲಾಗಿತ್ತು.

ಇಂಥದ್ರಲ್ಲಿ ಮುಸ್ಲಿಂ ಸಂಘಟನೆಗಳು ನೇಪಾಳವನ್ನ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಹಿಂದೂ ಸಂಘಟನೆಗಳ ಅಭಿಯಾನಕ್ಕೆ ಬೆಂಬಕ ಸೂಚಿಸಿ ಬೀದಿಗಿಳಿದಿರುವುದು ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಜೊತೆಗೆ ಚೀನಾಗೂ ಕೂಡ ದೊಡ್ಡ ಶಾಕ್‌ನ್ನೇ ಕೊಟ್ಟಿದೆ. ನೇಪಾಳದ ಮುಸಲ್ಮಾನರ ಪ್ರಕಾರ ಅವರಿಗೆ ಹಿಂದೂ ರಾಷ್ಟ್ರವೇ ಬೇಕು ಹೊರತು ಧರ್ಮನಿರಪೇಕ್ಷಿತ (ಸೆಕ್ಯೂಲರ್) ರಾಷ್ಟ್ರವಲ್ಲ ಎಂಬುದಾಗಿದೆ. ಒಂದು ದೇಶ ಹಿಂದೂ ರಾಷ್ಟ್ರವಾಗಿದ್ದರೆ ಆ ರಾಷ್ಟ್ರದಲ್ಲಿ ಎಲ್ಲಾ ಧರ್ಮಗಳಿಗೂ ಸುರಕ್ಷತೆಯಿರುತ್ತೆ ಅನ್ನೋದು ನೇಪಾಳಿ ಮುಸಲ್ಮಾನರ ಅಭಿಪ್ರಾಯವಾಗಿದೆ.

ಆದರೆ ಭಾರತದಲ್ಲಿ ಮಾತ್ರ ಇದರ ತದ್ವಿರುದ್ಧವಾದ ಸನ್ನಿವೇಶವಿದೆ. ಭಾರತವನ್ನ ಹಿಂದೂ ರಾಷ್ಟ್ರ ಮಾಡಬೇಕೆಂಬ ಅಭಿಯಾನವನ್ನ ಯಾರಾದರೂ ಶುರು ಮಾಡಿದರೆ ಅಷ್ಟೇ ಯಾಕೆ ಹಿಂದೂ ರಾಷ್ಟ್ರ ಅನ್ನೋ ಶಬ್ದ ಕೂಡ ಯಾರ ಬಾಯಿಯಿಂದರೂ ಬಂದರೆ ಭಾರತದ ಸೆಕ್ಯೂಲರ್ ಗಳೆಲ್ಲಾ ಬೀದಿಗಿಳಿದು ಬೊಬ್ಬೆಯಿಡೋಕೆ ಶುರು ಮಾಡುತ್ತಾರೆ. ಭಾರತದ ಸೆಕ್ಯೂಲರ್,‌ ಪ್ರಗತಿಪರ, ಬುದ್ಧಿಜೀವಿಗಳು, ಮುಸಲ್ಮಾನರಿಗೆ ಸ್ವಲ್ಪ ನೇಪಾಳದ ಮುಸಲ್ಮಾನರನ್ನ ನೋಡಿ ಕಲಿಯುವುದು ಬಹಳಷ್ಟಿದೆ ಅಲ್ಲವೇ?

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English