ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅವ್ಯವಹಾರ, ಉಪ ಆಯುಕ್ತರ ಸಭೆ

10:45 PM, Monday, March 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Kolluru ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರದ  ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಬಹಿರಂಗಸಿತ್ತು. ಆ ಬಳಿಕದ 10 ದಿನಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉಪ ಆಯುಕ್ತರು ಭೇಟಿ ನೀಡಿ  2005 ರಿಂದ 2019 ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶಗಳನ್ನು ವಿಚಾರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ.

ಬಳಿಕ ಅವರು  ಸಭೆ ನಡೆಸಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಾರ್ವಜನಿಕ ಕುಂದುಕೊರತೆಗಳು, ದೇವಸ್ಥಾನದ ಸ್ಥಿರಾಸ್ತಿ ಮತ್ತು ಚರಾಸ್ತಿ ನಿರ್ವಹಣೆಯ ಬಗ್ಗೆ, ಯಾತ್ರಾರ್ಥಿಗಳ ಸೌಲಭ್ಯ, ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ವಿವರ ಪಡೆದರು.

ಧಾರ್ಮಿಕ ದತ್ತಿ ಇಲಾಖೆಯ ಉಪ ಆಯುಕ್ತ ಜಯಪ್ರಕಾಶ, ದೇವಸ್ಥಾನದ ಕಾರ್ಯ ನಿರ್ವಹಣಾ ಅಧಿಕಾರಿ ಮಹೇಶ, ತಹಶೀಲ್ದಾರರು, ದೇವಸ್ಥಾನದ ಸಿಬ್ಬಂದಿ ವರ್ಗ, ಭೂಮಾಪನ ಇಲಾಖೆಯ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೊಲ್ಲೂರು ದೇವಸ್ಥಾನದ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿರುವ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕರ್ನಾಟಕಕ್ಕೂ ಮಾ.20ರಂದು ನಡೆದ ಸಭೆಯಲ್ಲಿ ಮೊದಲ ಬಾರಿ ಭಾಗವಹಿಸಲು ಅವಕಾಶ ನೀಡಲಾಯಿತು.

ಈ ವೇಳೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸದಸ್ಯರಾದ ಮಧುಸೂದನ ಅಯಾರ, ದಿನೇಶ ಎಂ.ಪಿ, ಚಂದ್ರ ಮೊಗೇರ, ಶ್ರೀನಿವಾಸ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಜಯಕುಮಾರ, ಹಿಂದೂ ಜನಜಾಗೃತಿ ಸಮಿತಿಯ ವಿಶ್ವನಾಥ ಹಾಗೂ ದಿನೇಶ ಉಪಸ್ಥಿತರಿದ್ದರು.

ಅಲ್ಲದೇ ದೇವಸ್ಥಾನದ ಆಡಳಿತವನ್ನು ಪಾರದರ್ಶಕವಾಗಿರಿಸುವ ದೃಷ್ಟಿಯಿಂದ ಇಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಣಯದ ಬಗ್ಗೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ವಿವರವನ್ನು ನೀಡಬೇಕೆಂದು ಉಪ ಆಯುಕ್ತರು ತಿಳಿಸಿದರು.

ಮಹಾಸಂಘವು ಆಕ್ಷೇಪಿಸಿದ ಎಲ್ಲಾ ವಿಷಯಗಳ ಬಗ್ಗೆ ಸೂಕ್ತ ಕ್ರಮಗೊಳ್ಳುವಂತೆ ಇಲ್ಲದಿದ್ದರೆ ಹೋರಾಟವನ್ನು ಮುಂದುವರಿಸುವುದಾಗಿ ಎಂದು ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರ ಗುರುಪ್ರಸಾದ ಗೌಡ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English