ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಎಪ್ರಿಲ್ 6 ರಂದು ನಡೆಯಲಿದ್ದು ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಂಜೇಶ್ವರದಲ್ಲಿ ಆರು, ಕಾಸರಗೋಡು ಏಳು, ಉದುಮ ಆರು, ಕಾಞಂಗಾಡ್ 11, ತೃಕ್ಕರಿಪುರ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮಂಜೇಶ್ವರ: ಎ. ಕೆ ಎಂ ಅಶ್ರಫ್ (ಮುಸ್ಲಿಂ ಲೀಗ್), ವಿ.ವಿ ರಮೇಶನ್ (ಸಿ ಪಿ ಐ ಎಂ), ಕೆ. ಸುರೇಂದ್ರನ್ (ಬಿಜೆಪಿ), ಪ್ರವೀಣ್ ಕುಮಾರ್ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಜೋನ್ ಡಿಸೋಜ (ಪಕ್ಷೇತರ), ಸುರೇಂದ್ರನ್ ಎಂ (ಪಕ್ಷೇತರ).
ಕಾಸರಗೋಡು: ಎನ್.ಎ ನೆಲ್ಲಿಕುನ್ನು (ಮುಸ್ಲಿಂ ಲೀಗ್), ವಿಜಯ ಕುಮಾರ್ ಕೆ.ಪಿ (ಬಿಎಸ್ ಪಿ), ಕೆ. ಶ್ರೀಕಾಂತ್ (ಬಿಜೆಪಿ), ರಂಜಿತ್ ರಾಜ್ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಎಂ. ಎ ಲತೀಫ್ (ಐಎನ್‌ಎಲ್), ನಿಶಾಂತ್ ಕುಮಾರ್ ಎಂ. ಬಿ (ಪಕ್ಷೇತರ), ಸುಧಾಕರನ್ (ಪಕ್ಷೇತರ)
ಉದುಮ: ಸಿ. ಎಚ್. ಕುಞಂಬು (ಸಿಪಿಐಎಂ), ಬಾಲಕೃಷ್ಣ ಪೆರಿಯ (ಕಾಂಗ್ರೆಸ್), ಎ . ವೇಲಾಯುಧನ್ (ಬಿಜೆಪಿ), ಗೋವಿಂದನ್ ಬಿ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಕುಞಂಬು ಕೆ. (ಪಕ್ಷೇತರ , ರಮೇಶನ್ ಕೆ. (ಪಕ್ಷೇತರ).
ಕಾಞಂಗಾಡ್: ಇ.ಚಂದ್ರಶೇಖರನ್ (ಸಿಪಿಐ), ಪಿ.ವಿ ಸುರೇಶ್ (ಕಾಂಗ್ರೆಸ್), ಬಲರಾಜ್ (ಬಿಜೆಪಿ), ಅಬ್ದುಲ್ ಸಮದ್ (ಎಸ್‌ಡಿಪಿಐ), ಟಿ. ಅಬ್ದುಲ್ ಸಮದ್ (ಜನತಾದಳ ಯುನೈಟೆಡ್), ರೇಷ್ಮಾ ಕರಿವೇಡಗ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಆಗಸ್ಟಿನ್ (ಪಕ್ಷೇತರ), ಕೃಷ್ಣನ್ ಪರಪ್ಪಚ್ಚಾಲ್ (ಪಕ್ಷೇತರ), ಮನೋಜ್ ಥಾಮಸ್ (ಪಕ್ಷೇತರ), ಶ್ರೀನಾಥ್ ಶಶಿ (ಪಕ್ಷೇತರ), ಸುರೇಶ್ ಬಿ.ಸಿ (ಪಕ್ಷೇತರ).
ತೃಕ್ಕರಿಪುರ: ಎಂ. ರಾಜಗೋಪಾಲ್ (ಸಿಪಿಐಎಂ), ಎಂ.ಪಿ ಜೋಸೆಫ್ (ಕೇರಳ ಕಾಂಗ್ರೆಸ್), ಶಿಬಿನ್ ಟಿ. ವಿ (ಬಿಜೆಪಿ), ಮಹೇಶ್ ಮಾಸ್ಟರ್ (ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ), ಲಿಯಾಖತ್ ಅಲಿ. ಪಿ. ( ಎಸ್‌ಡಿಪಿಐ ), ಸುಧನ್ ವೆಳ್ಳರಿಕುಂಡು (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಜೋಯಿ ಜೋನ್ (ಪಕ್ಷೇತರ), ಎಂ. ವಿ ಜೋಸೆಫ್ (ಪಕ್ಷೇತರ).
ಮೂವರು ಅಭ್ಯರ್ಥಿಗಳು ಸೋಮವಾರ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಮಂಜೇಶ್ವರ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ, ಕಾಸರಗೋಡು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಬ್ದುಲ್ ಅಝೀಜ್, ತೃಕ್ಕರಿಪುರದ ಪಕ್ಷೇತರ ಅಭ್ಯರ್ಥಿ ಚಂದ್ರನ್ ಎ. ಕೆ ನಾಮಪತ್ರ ಹಿಂತೆಗೆದುಕೊಂಡವರು.
Click this button or press Ctrl+G to toggle between Kannada and English