ತಲಪಾಡಿ, ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗಳ ದರ ಹೆಚ್ಚಳ

11:50 PM, Wednesday, March 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

Sasthana Tollಮಂಗಳೂರು :  ಎಪ್ರಿಲ್ 1ರಿಂದ ತಲಪಾಡಿ,  ಹೆಜಮಾಡಿ ಹಾಗೂ ಸಾಸ್ತಾನ  ಟೋಲ್‌ಗಳ ದರ ವನ್ನು  ನವಯುಗ ಸಂಸ್ಥೆಯು ಪರಿಷ್ಕರಣೆ ಮಾಡದೆ.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇರ ನಿರ್ವಹಣೆ ಮಾಡುವ ಬ್ರಹ್ಮರಕೂಟ್ಲು ಮತ್ತು ಎನ್‌ಐಟಿಕೆ ಟೋಲ್‌ಗೇಟ್‌ಗಳ ಪರಿಷ್ಕೃತ ದರ ಎಪ್ರಿಲ್ 1ರಂದು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಲಪಾಡಿ: ಲಘುವಾಹನ- ಏಕಮುಖ ಸಂಚಾರಕ್ಕೆ ಯಥಾವತ್ 40 ರೂ., ದ್ವಿಮುಖ ಸಂಚಾರಕ್ಕೆ 60ರಿಂದ 65ರೂ.ಗೆ ಏರಿಕೆ. ಮಾಸಿಕ ಪಾಸ್ ದರ 1,400 ರೂ.

ಲಘು ವಾಣಿಜ್ಯ ವಾಹನ- ಮಿನಿ ಬಸ್ ಏಕಮುಖ ಸಂಚಾರಕ್ಕೆ 65 ರೂ., ದ್ವಿಮುಖ ಸಂಚಾರಕ್ಕೆ 95 ರೂ., ಮಾಸಿಕ ಪಾಸ್ 2,155 ರೂ.

ಹೆಜಮಾಡಿ: ಲಘು ವಾಹನಗಳಿಗೆ ಇದ್ದ ಏಕಮುಖ 35ರಿಂದ 45 ರೂ.ಗೆ ಮತ್ತು ದ್ವಿಮುಖ ದರ 50ರಿಂದ 60 ರೂ.ಏರಿಕೆ ಮಾಡಲಾಗಿದೆ. ಮಾಸಿಕ ಪಾಸ್ ದರ 1,145ರಿಂದ 1,280ಕ್ಕೇರಿಸಲಾಗಿದೆ.

ಲಘು ವಾಣಿಜ್ಯ ವಾಹನ- ಸರಕು ವಾಹನ, ಮಿನಿ ಬಸ್‌ಗಳಿಗೆ ಏಕಮುಖ ದರ 55ರಿಂದ 60 ರೂ., ದ್ವಿಮುಖ ದರ 85ರಿಂದ 95 ರೂ.ಗೆ ಏರಿಕೆ ಮಾಡಲಾಗಿದೆ. ಮಾಸಿಕ ಪಾಸ್ ದರ 1,850ರಿಂದ 2,065ಕ್ಕೇರಿಸಲಾಗಿದೆ.

ಟ್ರಕ್, ಬಸ್‌ಗಳಿಗೆ ಏಕಮುಖ 115ರಿಂದ 130 ರೂ. ಮತ್ತು ದ್ವಿಮುಖ 175ರಿಂದ 195 ರೂ.ಗೆ ಏರಿಸಲಾಗಿದೆ. ಮಾಸಿಕ ಪಾಸ್ ದರ 3,880ರಿಂದ 4,325 ರೂ.ಗೆ ಏರಿಸಲಾಗಿದೆ. ಸ್ಥಳೀಯರ ಮಾಸಿಕ ಪಾಸ್ 255ರಿಂದ 285 ರೂ.ಗೆ ಏರಿಸಲಾಗಿದೆ.

ಸಾಸ್ತಾನ: ಲಘುವಾಹನ-ಏಕಮುಖ ಸಂಚಾರಕ್ಕೆ 45 ರೂ., ದ್ವಿಮುಖ ಸಂಚಾರಕ್ಕೆ 70 ರೂ., ಮಾಸಿಕ ಪಾಸ್ 1,505ರಿಂದ 1,555 ರೂ.ಗೆ ಏರಿಸಲಾಗಿದೆ.

ಲಘು ವಾಣಿಜ್ಯ ವಾಹನ-ಮಿನಿ ಬಸ್-ಏಕಮುಖ ಸಂಚಾರಕ್ಕೆ 75 ರೂ., ದ್ವಿಮುಖ ಸಂಚಾರಕ್ಕೆ 110ರಿಂದ 115 ರೂ.ಗೆ ಏರಿಕೆ ಮಾಡಲಾಗಿದೆ. ಮಾಸಿಕ ಪಾಸ್ 2,430ರಿಂದ 2,510ರೂ.ಗೆ ಏರಿಸಲಾಗಿದೆ.

ಟ್ರಕ್, ಬಸ್ ಏಕಮುಖ ಸಂಚಾರಕ್ಕೆ 155ರಿಂದ 160 ರೂ., ದ್ವಿಮುಖ ಸಂಚಾರಕ್ಕೆ 230ರಿಂದ 235 ರೂ.ಗೆ ಏರಿಸಲಾಗಿದೆ. ಮಾಸಿಕ ಪಾಸ್ 5,095ರಿಂದ 5,260 ರೂ.ಗೆ ಏರಿಸಲಾಗಿದೆ. ಸ್ಥಳೀಯರ ಮಾಸಿಕ ಪಾಸ್ 275 ರೂ.ನಿಂದ 285ಕ್ಕೇರಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English