ಸುಳ್ಯ: ಕುಂಜಾಡಿ ತರವಾಡು ಮನೆಯಲ್ಲಿ 60 ವರ್ಷಗಳ ಬಳಿಕ ಮೊದಲ ಬಾರಿ ನಡೆಯುತ್ತಿರುವ ಧರ್ಮ ನೇಮೋತ್ಸವ ಗುರುವಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕೊರೋನಾ ನಿಯಮ ಗಳಿಗನುಗುಣವಾಗಿ ಆರಂಭಗೊಂಡಿತು.
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕುಂಜಾಡಿ ತರವಾಡು ಕುಟುಂಬದ ಹಿರಿಯರು, ಯಜಮಾನರು, ಬಂಬಿಲ ಗುತ್ತು, ಮೇಗಿನ ಕುಂಜಾಡಿ, ಕೆಳಗಿನ ಕುಂಜಾಡಿ ಮಧ್ಯಸ್ಥರ ನೇತೃತ್ವದಲ್ಲಿ ಸಚಿವರು, ಸ್ವಾಮೀಜಿಗಳು, ಜನಪ್ರತಿನಿಧಿಗಳು, ರಾಜ್ಯ ರಾಜಕೀಯ- ಸಾಮಾಜಿಕ ಮುಖಂಡರು ಭೇಟಿ ನೀಡಿದ್ದಾರೆ.
ಗ್ರಾಮ ದೈವ ಅಬ್ಬೆಜಲಾಯ, ಉಲ್ಲಾಕುಳು ಮತ್ತು ರಕ್ತೇಶ್ವರಿ ದೈವಗಳ ಭಂಡಾರವನ್ನು ಮಧ್ಯಾಹ್ನ 11 ಗಂಟೆ ಹೊತ್ತಿಗೆ ಧರ್ಮ ನೇಮೋತ್ಸವದ ಆನೆ ಚಪ್ಪರದೊಳಗಿನ ಕೊಡಿಯಡಿಯ ಮತ್ತರ್ಮೆಯಲ್ಲಿ ಇರಿಸಲಾಯಿತು.
ಧರ್ಮ ನೇಮೋತ್ಸವದ ಪ್ರಯುಕ್ತ ನಿರಂತರ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಭಜನಾ ಮಂಟಪ ರಚಿಸಿ ಅಲ್ಲಿ ಕಟೀಲು ದುರ್ಗಾಪರಮೇಶ್ವರಿ ಸ್ಮರಣೆಯೊಂದಿಗೆ ಶ್ರೀದೇವಿಯ ಪ್ರತಿಮಾಲಂಕಾರ ಮಾಡಲಾಗಿತ್ತು.
ಈ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರುಗಳಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಆರ್.ಅಶೋಕ್, ಸಿ.ಪಿ.ಯೋಗೇಶ್ವರ್, ಗೋಪಾಲಯ್ಯ, ಪ್ರಭು ಚೌಹಾನ್, ಸಂಸದರಾದ ಮುನಿಸ್ವಾಮಿ, ಬಿ.ವೈ ರಾಘವೇಂದ್ರ, ಶೋಭಾ ಕರಂದ್ಲಾಜೆ, ಡಿ.ಕೆ ಸುರೇಶ್, ಅಣ್ಣಾ ಸಾಹೇಬ್ ಜೊಲ್ಲೆ, ಗದ್ದಿಗೌಡರ್, ಭಗವಂತ ಖೂಬಾ, ಅರುಣ್ ಸಿಂಗ್, ಸಿ.ಟಿ ರವಿ, ಮಿಥುನ್ ರೈ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಎಸ್‌ಪಿ ಋಷಿಕೇಷ್ ಸೋನವನೆ, ಡಿವೈಎಸ್‌ಪಿ ಗಾನಾ ಪಿ. ಕುಮಾರ್ ಭಾಗಿಯಾಗಿದ್ದರು.
Click this button or press Ctrl+G to toggle between Kannada and English