ಮಂಗಳೂರು ಬೋಟ್ ದುರಂತ : ಮೂವರು ಸಾವು, ಒಂಬತ್ತು ಮಂದಿ ನಾಪತ್ತೆ

11:17 PM, Tuesday, April 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

ship ಮಂಗಳೂರು: ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹವನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗ ಮಂಗಳವಾರ ಪತ್ತೆ ಹಚ್ಚಿದ್ದು,  ಮಾಣಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.

ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಇತರ ಒಂಭತ್ತು ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಕೋಸ್ಟ್‌ಗಾರ್ಡ್‌ನವರು ಶೋಧಕಾರ್ಯ ಮುಂದುವರಿಸಿದ್ದಾರೆ. ರಕ್ಷಿಸಲ್ಪಟ್ಟ ಇಬ್ಬರು ಮತ್ತು ಮೂವರ ಮೃತದೇಹವನ್ನು ಕಡಲ ಕಿನಾರೆಗೆ ತಂದು ಕೋಸ್ಟ್‌ಗಾರ್ಡ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ.‌

ಈ ಘಟನೆಯಲ್ಲಿ ರಕ್ಷಿಸಲ್ಪಟ್ಟವರನ್ನು ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು‌ ತಮಿಳುನಾಡಿನ ವೆಲು ಮುರುಗನ್ ರಾಮಲಿಂಗನ್‌ ಎಂದು ಗುರುತಿಸಲಾಗಿದೆ.

ಕೇರಳದ ಬೇಪೂರ್‌ನಿಂದ ಎ.11ರಂದು ಬೆಳಗ್ಗೆ 10 ಗಂಟೆಗೆ ಹೊರಟ ಮೀನುಗಾರಿಕೆಯ ಈ ಬೋಟ್ ಸೋಮವಾರ ತಡರಾತ್ರಿ ಸುಮಾರು 2:05ರ ವೇಳೆಗೆ ಮುಳುಗಡೆಯಾಯಿತು. ಸಮೀಪದಲ್ಲೇ ಇದ್ದ ಇನ್ನೊಂದು ಹಡಗು ಮತ್ತು ಮಾಹಿತಿ ‌ಪಡೆದ ಕೋಸ್ಟ್‌ಗಾರ್ಡ್ ಸಿಬ್ಬಂದಿ ವರ್ಗವು ತುರ್ತು ಕಾರ್ಯಾಚರಣೆ ನಡೆಸಿತ್ತು.

Ship

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English