10 ಸಾವಿರ ರೂಪಾಯಿಗೆ ಕೊರೋನಾ ನಕಲಿ ಇಂಜೆಕ್ಷನ್

1:30 PM, Friday, April 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

corona Injectionಬೀದರ್ : ಮಾರುಕಟ್ಟೆಯಲ್ಲಿ ಕೊರೋನಾ ನಕಲಿ ಇಂಜೆಕ್ಷನ್ ಬಂದಿದ್ದು, 10 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ ಎಂಬುದಾಗಿಯೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕೊರೋನಾ ನಿಯಂತ್ರಣ ಕ್ರಮ ಕುರಿತಂತೆ ಚರ್ಚಿಸಲು ಸಿಎಂ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಅಲ್ಲಿ ಏನ್ ಚರ್ಚೆ ಮಾಡ್ತಾರೋ ನೋಡೋಣ. ತಮ್ಮ ತಪ್ಪು ಮರೆ ಮಾಚಲು ಅಷ್ಟೇ ಸರ್ವ ಪಕ್ಷಗಳ ಸಭೆ ಎಂದರು.

ರಾಜ್ಯದಲ್ಲಿ ಜನರು ಕೊರೋನಾ ಸೋಂಕಿನ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಔಷಧಿ ಕೂಡ ಸಿಗುತ್ತಿಲ್ಲ. ಕೊರೋನಾ ಸೋಂಕಿತರು ಚಿಕಿತ್ಸೆಗಾಗಿ ದಾಖಲಾಗಲು ಬೆಡ್ ಸಿಗೋದೆ ಕಷ್ಟ ಆಗಿದೆ. ಇದರ ಮಧ್ಯೆ ರಾಜ್ಯದಲ್ಲಿ ಕೊರೋನಾ ನಕಲಿ ಇಂಜೆಕ್ಷನ್ ಹಾವಳಿ ಶುರುವಾಗಿದೆ. 10 ಸಾವಿರ ರೂಪಾಯಿಗೆ ನಕಲಿ ಇಂಜೆಕ್ಷನ್ ಮಾರಾಟವಾಗುತ್ತಿದೆ ಎಂಬುದಾಗಿ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English