ಮಂಗಳೂರು :ಕಾಸರಗೋಡು ಚಿನ್ನಾ ನಿರ್ದೇಶನದ, ಗೌಡ ಸರಸ್ವತ ಬ್ರಾಹ್ಮಣ ಸಮಾಜದವರು ಮಾತನಾಡುವ ಕೊಂಕಣಿ ಭಾಷೆಯಲ್ಲಿ ತಯಾರಾದ ಕೊಂಕಣಿ ಚಲನಚಿತ್ರ ಉಜ್ಜಾಡು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡಿಸೆಂಬರ್ 20 ರಿಂದ 27 ರ ತನಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಡಿಸೆಂಬರ್ 21 ರಂದು ಬೆಳಗ್ಗೆ 10.15 ಕ್ಕೆ ಬೆಂಗಳೂರಿನ ಲೀಡೋ ಚಿತ್ರ ಮಂದಿರದಲ್ಲಿ ಅಸಂಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಖ್ಯಾತ ಚಿತ್ರ ಕಲಾವಿದರ, ತಂತ್ರಜ್ಞರ ಸಮ್ಮುಖದಲ್ಲಿ ಈ ಚಿತ್ರ ಪ್ರದರ್ಶಿಸಲ್ಪಡುತ್ತದೆ. ಕಾರ್ಕಳ, ಗೋವಾದಲ್ಲಿ ಕೇವಲ 18 ದಿನಗಳಲ್ಲಿ ಚಿತ್ರೀಕರಿಸಲ್ಪಟ್ಟ ಈ ಚಲನಚಿತ್ರಕ್ಕೆ ಕೇರಳದ ಖ್ಯಾತ ಛಾಯಾಗ್ರಾಹಕ ಉತ್ಪಲ್ ನಾಯನಾರ್ ಕ್ಯಾಮಾರಾಮೆನ್ ಆಗಿ, ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ, ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಶಿವಧ್ವಜ್, ನೀತು, ಸದಾಶಿವ ಬ್ರಹ್ಮಾವರ್, ಉಮಾಶ್ರೀ, ಸಂಧ್ಯಾ ಪೈ, ಶವಿಭೂಷಣ್ ಕಿಣಿ, ಓಂ ಗಣೇಶ್ ಮೊದಲಾದವರು ಅಭಿನಯಿಸಿದ್ದಾರೆ.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಕಾಸರಗೋಡು ಚಿನ್ನಾ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. 1979 ರಲ್ಲಿ ಚಲನಚಿತ್ರ ರಂಗ ಪ್ರವೇಶಿಸಿದ ಚಿನ್ನಾ ಆದರ್ಶ ಫಿಲಿಂ ಇನ್‌ಸ್ಟಿಟ್ಯೂನಲ್ಲಿ ಚಿನ್ನದ ಪದಕ ಪಡೆದಿದ್ದರು.
Click this button or press Ctrl+G to toggle between Kannada and English