ಯಾಕೆ ಈ ಪಾರ್ಷಿಯಾಲಿಟಿ ? ಮಂದಿರ, ಮಸೀದಿ, ಚರ್ಚ್ ಸಂಪೂರ್ಣ ಬಂದ್ !

4:53 PM, Thursday, April 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

mandhirಉಡುಪಿ : ಸರಕಾರದ ಆದೇಶದಂತೆ ಕೊವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಮೇ4 ರವರೆಗೆ ಕರೋನ ನೈಟ್ ಕರ್ಫ್ಯೂ ಮತ್ತು ವಾರಂತ್ಯ ಕರ್ಫ್ಯೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿ ಗೊಳಿಸಿದ್ದು, ಅದರಂತೆ ಮಸೀದಿ, ದೇವಸ್ಥಾನ, ಚಚ್೯ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಾರ್ವಜನಿಕರಿಗೆ ಮುಂದಿನ ಆದೇಶವರೆಗೆ ಮುಚ್ಚಬೇಕು ಎಂದು ಉಡುಪಿ ಜಿಲ್ಲಾಧಿಕಾರಿ‌ ಜಿ.ಜಗದೀಶ್ ತಿಳಿಸಿದ್ದಾರೆ.

ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆ ಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸಬಹುದಾಗಿದೆ. ಅಲ್ಲದೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಆದರೆ ಅಂಗಡಿ ಮುಗ್ಗಟ್ಟುಗಳು, ಮನರಂಜನಾ ಮಂದಿರಗಳು, ಬೀರು ಶಾಪ್ ಗಳ ಮುಂದೆ ಜನ ಜಂಗುಳಿಯೇ ಇದೆ. ಅಲ್ಲಿ ಯಾವುದೇ ನಿರ್ಬಂಧವಿಲ್ಲ. ಧ್ಯಾನ ಮಾಡುವ ಮಂದಿರಗಳಲ್ಲಿ ಕೊರೋನಾ ಹರಡುತ್ತದೆಯೇ. ಸರಕಾರ ಮತ್ತು ಸರಕಾರದ ಆಡಳಿತ ಯಾಕೆ ಮಂದಿರಗಳ ಮೇಲೆ ಪರ್ಷಿಯಾಲಿಟಿ ಮಾಡುತ್ತದೆ ಎಂಬುದೇ ಜನ ಸಾಮಾನ್ಯರ ಪ್ರಶ್ನೆ ?

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English