ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ವರದಿಯಾದ 474 ಕೊರೊನಾ ವೈರಸ್ ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 39,718 ಕ್ಕೆ ಏರಿವೆ. ಈ ಪೈಕಿ 2,825 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಒಟ್ಟು 7,00,688 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 6,60,970 ಮಾದರಿಗಳು ನೆಗೆಟಿವ್ ಆಗಿದೆ. ಗುರುವಾರ 121 ಜನರು ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 36,145ಕ್ಕೆ ಏರಿದೆ. ಈವರೆಗೆ ಒಟ್ಟು 745 ಸಾವುಗಳು ಸಂಭವಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 47,706 ಮಾಸ್ಕ್ ಉಲ್ಲಂಘನೆ ಪ್ರಕರಣ ವರದಿ ಮಾಡಲಾಗಿದ್ದು 49,68,030 ರೂ.ಗಳ ದಂಡವನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 274 ಕೊರೊನಾ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 27,757ಕ್ಕೆ ಏರಿದೆ. ಈ ಪೈಕಿ 1,165 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಉಡುಪಿ ತಾಲೂಕಿನಲ್ಲಿ 127, ಕುಂದಾಪುರದಲ್ಲಿ 91, ಕಾರ್ಕಳದಲ್ಲಿ 53 ಮಂದಿಗೆ ಹಾಗೂ ಇತರೆ ಜಿಲ್ಲೆಯ 3 ಮಂದಿಗೆ ಕೊರೊನಾ ದೃಢಪಟ್ಟಿದೆ.
ಈವರೆಗೆ 4,78,915 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಗುರುವಾರ 193 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 26,398 ಕ್ಕೆ ಏರಿದೆ. ಈವರೆಗೆ ಒಟ್ಟು 194 ಸಾವುಗಳು ಸಂಭವಿಸಿವೆ.
ಇನ್ನು ಈವರೆಗೆ 1,73,942 ಮಂದಿ ಮೊದಲ ಡೋಸ್ ಕೊರೊನಾ ಲಸಿಕೆ ಹಾಗೂ 34,725 ಮಂದಿ ಎರಡನೇ ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English