ಮಂಗಳೂರು : ನಗರದ ಕೆಲವು ಜ್ಯುವೆಲ್ಲರಿ ಶಾಪ್, ಚಪ್ಪಲಿ ಅಂಗಡಿಗಳು, ಬಟ್ಟೆ ಬರೆ, ವಾಚ್ ಅಂಗಡಿಗಳು ಇಂದು ಕೂಡ ತೆರದಿದ್ದುದನ್ನು ಗಮನಿಸಿದ ಪೊಲೀಸರು ಅವುಗಳನ್ನು ಮುಚ್ಚಿವಂತೆ ಹೇಳಿದರು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಶುಕ್ರವಾರ ಬೆಳಿಗ್ಗೆ ಪೊಲೀಸರು ಮುಚ್ಚಿಸಿದ್ದಾರೆ.
ಕೆಲವು ಅಂಗಡಿಗಳು ಇಂದು ಕೂಡ ತೆರೆದಿದ್ದ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿಅವುಗಳನ್ನು ಮುಚ್ಚಿಸಲಾಯಿತು,
ನಗರದ ಕೇಂದ್ರ ಮಾರುಕಟ್ಟೆ, ಹಂಪನಕಟ್ಟೆ, ಮಿಲಾಗ್ರಿಸ್ ಮೊದಲಾದ ಕಡೆಗಳಲ್ಲಿ ಆಯುಕ್ತರು ಹಾಗು ಉಪ ಆಯುಕ್ತರ ನೇತೃತ್ವದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರ ಅಂಗಡಿಗಳನ್ನು ಮುಚ್ಚಿಸುವ ಕಾರ್ಯ ಶುಕ್ರವಾರ ನಡೆಯಿತು. ಈ ವೇಳೆ ಹಿರಿಯ ನಾಗರಿಕರು, ಮಹಿಳೆಯರಿಗೆ ಹೂ ನೀಡಿ ಜಾಗೃತಿ ಮೂಡಿಸಿದರು.
ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಎಸಿಪಿ ನಟರಾಜ್, ಇನ್ನಿತರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Click this button or press Ctrl+G to toggle between Kannada and English