ಬೈಕ್‌ಗೆ ನಾಯಿ ಕಟ್ಟಿ ರಸ್ತೆಯಲ್ಲಿ ಎಳೆದ ಪ್ರಕರಣ, ಓರ್ವ ಆರೋಪಿ ಬಂಧನ

7:51 PM, Friday, April 23rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

neelappaಮಂಗಳೂರು :  ಅಮಾನವೀಯವಾಗಿ ನಾಯಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ಬೈಕಿನಲ್ಲಿ ನಾಯಿ ಹಿಡಿದುಕೊಂಡಿದ್ದ ಹಿಂಬದಿ ಸವಾರ ಕೊಪ್ಪಳ ಜಿಲ್ಲೆಯ ನೀಲಪ್ಪ(30)ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸುರತ್ಕಲ್ ಎನ್‌ಐಟಿಕೆ ಕಾಲನಿಯಿಂದ ರಸ್ತೆಯಲ್ಲಿ ಎ.17ರಂದು ರಾತ್ರಿ ಬೈಕ್‌ನ ಹಿಂಬದಿಗೆ ಹಗ್ಗದಲ್ಲಿ ಕಟ್ಟಿಹಾಕಿ ನಾಯಿಯನ್ನು ಎಳೆದುಕೊಂಡು ಹೋಗುವ ದೃಶ್ಯದ ವಿಡಿಯೋವನ್ನು ಸಾಮಾಜಿಕ  ಜಾಲತಾಣದಲ್ಲಿ ಬಿಡಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ  ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದರು. ಈ ನಡುವೆ ವಿಡಿಯೋ ಮಾಡಿದವರು ವಿಳಂಬವಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದರು.

ಬಂಧಿತ ಆರೋಪಿಯು ನಾಯಿ ಸತ್ತು ಹೋಗಿದ್ದ ಕಾರಣ ಅದನ್ನು ಹೂಳಲು ಹೀಗೆ ತೆಗೆದುಕೊಂಡು ಹೋಗಿದ್ದಾಗಿ ಳಿಸಿದ್ದಾನೆ. ಆದರೆ ವಿಡಿಯೋ ಮಾಡಿದವರು, ನಾಯಿ ಸತ್ತಿರಲಿಲ್ಲ, ನರಳಾಡುತ್ತಿತ್ತು ಎಂದು ಸಾಕ್ಷ್ಯ ಹೇಳಿದ್ದಾರೆ. ಹಾಗಾಗಿ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಒಂದು ವೇಳೆ ನಾಯಿ ಸತ್ತಿದ್ದರೂ ಅಮಾನವೀಯ ರೀತಿಯಲ್ಲಿ ಹೀಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗುವುದು ತಪ್ಪು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಂಧಿತ ನೀಲಪ್ಪ ಕಟ್ಟಡ ನಿರ್ಮಾಣ ಕಾರ್ಮಿಕನಾಗಿದ್ದು, ಇನ್ನೋರ್ವ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English