ಉಡುಪಿ : ಜಿಲ್ಲಾಧಿಕಾರಿ ಜಿ ಜಗದೀಶ್ ಮಾಸ್ಕ್ ಧರಿಸಿದೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕುರಿತು ಸ್ಪಷ್ಟನೆ ನೀಡಿದ್ದು. ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೇನೆ ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕಬೇಕಿಲ್ಲ. ನನ್ನ ಮನೆಯ ಪಕ್ಕದಲ್ಲೇ ಕಾರ್ಯಕ್ರಮಿದ್ದದ್ದು. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿಯವರ ಮಗಳ ಕಾರ್ಯಕ್ರಮವಾಗಿತ್ತು. ನಾಲ್ಕು ಮನೆಯ ಕುಟುಂಬಸ್ಥರು ಹೆಚ್ಚು ಕಮ್ಮಿ 20 ಮಂದಿ ಅದರಲ್ಲಿ ಭಾಗಿಯಾಗಿದ್ದರು. ನಾನು ಊಟಕ್ಕೂ ನಿಲ್ಲದೆ, ಐದಾರು ನಿಮಿಷವಷ್ಟೇ ಇದ್ದು ಹೊರಟೆ . ಕೇವಲ ಫೋಟೋಕ್ಕಾಗಿ ಮಾತ್ರ ಮಾಸ್ಕನ್ನು ತೆಗೆದು ಹಾಕಿಕೊಂಡಿದ್ದೇನೆ. ಸೀಮಿತ ಅವಧಿ ಮಾತ್ರ ಇದ್ದೆ ಅಷ್ಟೆ, ಎಂದು ಸ್ಪಷ್ಟನೆ ನೀಡಿದ್ದಾರೆ.
ಸ್ವತಃ ಡಿಸಿಯವರೇ ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಜನಸಾಮಾನ್ಯರಿಗೊಂದು ನ್ಯಾಯ ಅಧಿಕಾರಿಗಳಿಗೊಂದು ನ್ಯಾಯವೇ ಎಂದು ಜನರು ಪ್ರಶ್ನೆ ಮಾಡಿದ್ದರು. ಡಿಸಿಯವರು ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
Click this button or press Ctrl+G to toggle between Kannada and English