ವೀಕೆಂಡ್‌ ಕರ್ಫ್ಯೂ ನಡುವೆಯೇ ವಿವಾಹ : ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹಕ್ಕೆ ಪೊಲೀಸರ ಬೆಂಬಲ

9:22 PM, Sunday, April 25th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tungappa Bangeraಬೆಳ್ತಂಗಡಿ :  ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ವೀಕೆಂಡ್‌ ಕರ್ಫ್ಯೂ ಮತ್ತು ಇತರ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 25 ರ ಭಾನುವಾರ ಆಯೋಜಿಸಲಾಗಿದೆ.

ಪುಂಜಾಲಕಟ್ಟೆಯ ಪೊಲೀಸ್‌ ಠಾಣೆಯ ಸಮೀಪದಲ್ಲೇ ಇನ್ನು ಈ ಕಾರ್ಯಕ್ರಮ ನಡೆಸಲಾಗಿದೆ. ನೂರಾರು ಜನರು ಸೇರಿ ಕೊರೊನಾ ಉಲ್ಲಂಘನೆ ಯಾಗುತ್ತಿದ್ದರೂ ಕೂಡಾ ಪೊಲೀಸರು ಮಧ್ಯಪ್ರವೇಶ ಮಾಡಿಲ್ಲ. ಸಾಮಾನ್ಯ ಜನರ ವಿರುದ್ದ ಪ್ರಕರಣ ದಾಖಲಿಸಿ, ದಂಡ ವಿಧಿಸುವ ಪೊಲೀಸರು ಈ ವಿವಾಹದ ವಿಚಾರದಲ್ಲಿ ಸುಮ್ಮನಿರುವುದರ ಕುರಿತು ಜನರಿಗೆ ಅನುಮಾನವಿದೆ.

ಕೊರೊನಾ ಕರ್ಫ್ಯೂ ಹಾಗೂ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ಅದಕ್ಕೆ ಸಹಕಾರ ನೀಡಿದ  ಪೊಲೀಸರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿವಾಹ ಕಾರ್ಯಕ್ರಮದಲ್ಲಿ ನೂರಾರು ಜನರು ಸೇರಿದ್ದರು. ಹಾಗೆಯೇ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English