ಬಾಣಂತಿ ಮಹಿಳೆಯೊಬ್ಬರನ್ನು ರಸ್ತೆಯಲ್ಲಿ ಗಮನಿಸಿದ ಪೊಲೀಸರ ಮಾನವೀಯತೆ ನೋಡಿ ?

12:56 PM, Monday, April 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

Police ಮಂಗಳೂರು : ಆರ್ಕುಳ ಪೊಲೀಸ್ ಚೆಕ್ ಪೋಸ್ಟ್‌‌ನಲ್ಲಿ ಕಾರು ಕೆಟ್ಟುಹೋಗಿ ಪರದಾಡುತ್ತಿರುವ ಬಾಣಂತಿ ಮಹಿಳೆಯೊಬ್ಬರನ್ನು ಗಮನಿಸಿದ ಪೊಲೀಸರು   ಇಲಾಖೆ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.

ಮಹಿಳೆಯು ಹೆರಿಗೆಗೆಂದು ವಿಟ್ಲದಿಂದ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಆರ್ಕುಳ ಪೊಲೀಸ್ ಚೆಕ್ ಪೋಸ್ಟ್ ಬಳಿ ಅವರ ಕಾರು ಕೆಟ್ಟು ಹೋಗಿದ್ದು, ಈ ವೇಳೆ ಸ್ಥಳಕ್ಕೆ ಧಾವಿಸಿದ ಎಎಸ್ಐ ಹರೀಶ್ ಮತ್ತು ವಿಜಯ್‌ಕುಮಾರ್ ವಿ. ಅವರು ತಮ್ಮ ಇಲಾಖೆ ವಾಹನದಲ್ಲಿಯೇ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ.

ಹರೀಶ್ ಅವರು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎಎಸ್ಐ ಮತ್ತು ವಿಜಯ್ ಕುಮಾರ್ ಅವರು ಪಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English