ಕೊರೊನಾ ಸೋಂಕಿನಿಂದ ಇಂಡಿಯಾ ಆಸ್ಪತ್ರೆಯಲ್ಲಿ ಮೃತರಾದ ವೈದ್ಯೆ 8 ತಿಂಗಳ ಹಿಂದೆಯಷ್ಟೇ ಮದುವೆಯಾದ್ದರು

3:41 PM, Wednesday, April 28th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Indianaಮಂಗಳೂರು: ಕೇರಳ ಮೂಲದ ಯುವ ವೈದ್ಯೆ ಕೊರೊನಾ ಸೋಂಕಿನಿಂದ ಇಂಡಿಯಾನ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.

ನಗರದ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು‌. ಈ ಹಿನ್ನೆಲೆಯಲ್ಲಿ  ಆಕೆಯನ್ನು ಅದೇ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ಆದರೆ ಅವರು ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ.

ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿಯೂ ಆಕೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರು.

ವೈದ್ಯೆಗೆ ವಿವಾಹವಾಗಿ ಕೇವಲ 8 ತಿಂಗಳಾಗಿದ್ದು, ಪತಿ-ಪತ್ನಿ ಇಬ್ಬರೂ ಇಂಡಿಯಾನ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು‌. ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ಅವರು ಸೋಂಕಿನಿಂದ ಪಾರಾಗದೆ ಮೃತಪಟ್ಟಿದ್ದಾರೆ.

ಮೃತದೇಹವನ್ನು ಅವರ ಸ್ವಂತ ಊರಾದ ತಲಶ್ಶೇರಿಗೆ ರವಾನೆ ಮಾಡಲಾಗಿದ್ದು, ಅಲ್ಲಿಯೇ ದಫನ ಕಾರ್ಯ ನಡೆಯಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English