ಪುತ್ತೂರಿನಲ್ಲಿ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ಪೇಟೆಗೆ ಬಂದ ವ್ಯಕ್ತಿ

5:10 PM, Saturday, May 1st, 2021
Share
1 Star2 Stars3 Stars4 Stars5 Stars
(No Ratings Yet)
Loading...

dog Maskಪುತ್ತೂರು :  ಪೇಟೆಗೆ ಬಂದಾಗ ತಮ್ಮ ಜತೆ ಕರೆ ತಂದಿದ್ದ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ದ್ವಿಚಕ್ರ ವಾಹನದಲ್ಲಿ ಕರೆತಂದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.

ಪ್ರವೀಣ್‌ ಎಂಬವರು ಗುರುವಾರ ಬೆಳಗ್ಗೆ ಪುತ್ತೂರು ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಾಗ ನಾಯಿ ಮರಿಯನ್ನೂ ಕೂರಿಸಿಕೊಂಡು ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ಇದನ್ನು ಗಮನಿಸಿದ್ದರು.

ತಾವು ಮಾಸ್ಕ್‌ ಧರಿಸಿದ್ದಲ್ಲದೆ ನಾಯಿ ಮರಿಗೂ ಮಾಸ್ಕ್‌ ಹಾಕಿದ್ದರು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಿರುವಾಗ ಸಾಕುಪ್ರಾಣಿಗಳ ಬಗೆಗೂ ಕಾಳಜಿ ವಹಿಸಬೇಕಲ್ಲವೇ? ಇದು ನಮ್ಮ ಜವಾಬ್ದಾರಿಯಲ್ಲವೇ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English