ತ್ಯಾಜ್ಯದ ಪ್ಲಾಸ್ಟಿಕ್ ಬ್ಯಾಗನ್ನು ನೇತ್ರಾವತಿ ನದಿಗೆ ಎಸೆದ ಪ್ರಕರಣ, ಕೇಸು ದಾಖಲು

9:29 PM, Saturday, May 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

garbage ಮಂಗಳೂರು :  ನೇತ್ರಾವತಿ ಸೇತುವೆಯಲ್ಲಿ ಕಾರು ನಿಲ್ಲಿಸಿ ತ್ಯಾಜ್ಯದ ಪ್ಲಾಸ್ಟಿಕ್ ಬ್ಯಾಗನ್ನು ನದಿಗೆ ಎಸೆಯುತ್ತಿದ್ದನ್ನು ಹಿಂಬದಿಯಲ್ಲಿದ್ದ ಇನ್ನೊಂದು  ಕಾರಿನವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದನ್ನು ಗಮನಿಸಿ  ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ  ಕೆ.ಎ. 03 ಎನ್‌ಬಿ 4648 ಸಂಖ್ಯೆಯ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾ.ಹೆ.66ರ ಉಳ್ಳಾಲ ಸೇತುವೆಯಲ್ಲಿ ಶನಿವಾರ ಕಾರು ನಿಲ್ಲಿಸಿ ನದಿಗೆ ತ್ಯಾಜ್ಯ ಎಸೆಯುತ್ತಿದ್ದ ಶೈಲಜಾ ನಾಯಕ್, ರಚನಾ ನಾಯಕ್, ಸುಶೀಲಾ ಎಂಬವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಮನೆಯಿಂದ ಕೆಲಸದಾಕೆಯನ್ನು ಶನಿವಾರ ಬೆಳಗ್ಗೆ ಕೋಡಿಕಲ್‌ನಿಂದ  ತೊಕ್ಕೊಟ್ಟಿನಲ್ಲಿ ಬಿಟ್ಟು ಮರಳಿ ಕಾರಿನಲ್ಲಿ ಬರುತ್ತಿದ್ದಾಗ ಕಸದ ಪ್ಲಾಸ್ಟಿಕ್ ಬ್ಯಾಗನ್ನು ನ ನೇತ್ರಾವತಿ ಸೇತುವೆಯಲ್ಲಿ ಕಾರು ನಿಲ್ಲಿಸಿ ತ್ಯಾಜ್ಯದ ಪ್ಲಾಸ್ಟಿಕ್ ಬ್ಯಾಗನ್ನು ನದಿಗೆ ಎಸೆಯುತ್ತಿದ್ದರು. ಅದನ್ನು ಹಿಂಬದಿಯಲ್ಲಿದ್ದ ಇನ್ನೊಂದು ಕಾರಿನವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅದು ಮಾಧ್ಯಮ ಮತ್ತು ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಿತು.

ಕಾರಿನ ನಂಬರ್ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಕಾರಣ ಪೊಲೀಸ್ ಆಯುಕ್ತ ಶಶಿಕುಮಾರ್‌ರ ನಿರ್ದೇಶನದ ಮೇರೆಗೆ ಕಂಕನಾಡಿ ನಗರ ಠಾಣೆಯ ಪೊಲೀಸರು ಕೆಲವೇ ಗಂಟೆಯೊಳಗೆ ಕಾರನ್ನು ವಶಪಡಿಸಿಕೊಂಡರು.

Garbage

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English