ದ.ಕ. ಜಿಲ್ಲೆಯಲ್ಲಿ ಮೇ 7 ರಿಂದ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ, ಮೇ 15ರ ಬಳಿಕ ಸಂಪೂರ್ಣ ಬಂದ್

11:33 PM, Thursday, May 6th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rajendraಮಂಗಳೂರು : ದ.ಕ. ಜಿಲ್ಲೆಯಲ್ಲಿ ಮೇ 7 ರಿಂದ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ಅವಧಿಯಲ್ಲಿ ಅಗತ್ಯ ಸೇವೆಗಳು ಬೆಳಿಗ್ಗೆ 6 ರಿಂದ  9 ರವರೆಗೆ ಮಾತ್ರ ಲಭ್ಯವಿದೆ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ.  ಮೇ 15ರ ಬಳಿಕ ಮದುವೆ ಸಮಾರಂಭಗಳಿವೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತದ ಗುರುವಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಶನಿವಾರ ಹಾಗೂ ರವಿವಾರದಂದು ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದ್ದು, ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿರಲಿವೆ. ಈ ಅವಧಿಯಲ್ಲಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಗಳ ಸೇವೆ ಲಭ್ಯ ಇರಲಿದೆ. ಸಾರ್ವಜನಿಕರು ತಮ್ಮ ಸ್ಥಳೀಯ ವ್ಯಾಪ್ತಿಯಿಂದಲೇ ಸೇವೆಯನ್ನು ಪಡೆಯಬೇಕಾಗಿದೆ. ರೋಗಿಗಳನ್ನು ಆಸ್ಪತ್ರೆಗಳಿಗೆ ರವಾನೆ ಮಾಡುವಂತಹ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗಿದೆ. ಇದನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು, ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿರಲಿವೆ.

24 ಗಂಟೆ ಕಾರ್ಯಾಚರಿಸುವ ತುರ್ತು ಅಥವಾ ಅಗತ್ಯ ಸೇವೆಗಳೊಂದಿಗೆ ವ್ಯವರಿಸುವ ಕಂಪೆನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ನಿರ್ಮಾಣ ಕಾರ್ಯಗಳಿಗೆ ವೀಕೆಂಡ್ ನಲ್ಲಿ ಅವಕಾಶವಿಲ್ಲ. ಒಂದೊಮ್ಮೆ ನಿರ್ಮಾಣ ಕಾಮಗಾರಿ ನಡೆಯುವ ಪ್ರದೇಶದಲ್ಲೇ ಕಾರ್ಮಿಕರಿದ್ದಲ್ಲಿ ಮಾತ್ರ ನಿರ್ಮಾಣ ಕಾರ್ಯಕ್ಕೆ ಅವಕಾಶ ನೀಡಲಾಗಿದೆ.

ವಾರಾಂತ್ಯದಲ್ಲಿ ಪೂರ್ವ ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಈ ಹಿಂದಿನ ಆದೇಶದಂತೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಶವಸಂಸ್ಕಾರಗಳಿಗೆ 5 ಜನರ ಮಿತಿಯಲ್ಲಿ ನಡೆಸಲು ಅನುಮತಿಸಲಾಗಿದೆ.

ಮೇ 15ರ ಬಳಿಕ ಮದುವೆ ಸೇರಿದಂತೆ ಯಾವುದೇ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟು ನಿಟ್ಟಿನ ಆದೇಶ ನೀಡಿದೆ. ಈಗಾಗಲೇ ನಿಗದಿಯಾಗಿರುವ ಸಮಾರಂಭಗಳು ಮದುವೆಗಳನ್ನು ಸಂಪೂರ್ಣವಾಗಿ ಮುಂದೂಡಬೇಕು ಎನ್ನುವ ಆದೇಶ ನೀಡಲಾಗಿದೆ.

ಮೇ 15ರ ತನಕ ಈಗಾಗಲೇ ನಿಗದಿಯಾಗಿರುವ ಮದುವೆ ಸಮಾರಂಭಗಳಿಗೆ ಮಾತ್ರ ಕೋವಿಡ್ ಮಾರ್ಗಸೂಚಿ ಹಾಗೂ ಈ ಹಿಂದೆ ಸರಕಾರ ಪ್ರಕಟಿಸಿದ ಮಾರ್ಗಸೂಚಿಯಂತೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮೇ 15ರ ಮಧ್ಯರಾತ್ರಿ 12ಗಂಟೆಯಿಂದ ಮುಂದಿನ ಅದೇಶದ ತನಕ ಮದುವೆ ಸೇರಿದಂತೆ ಎಲ್ಲಾ ಸಮಾರಂಭಗಳನ್ನು ನಿಷೇಧಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English