ಕೊರೋನ ಸೋಂಕು ಪ್ರಕರಣಗಳು : ದ.ಕ. ಜಿಲ್ಲೆ -1,513 ಮೂರು ಸಾವು, ಉಡುಪಿಯಲ್ಲಿ- 1047 ಹತ್ತು ಸಾವು

10:58 PM, Saturday, May 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

Corona ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರ 1,513 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. ಅಲ್ಲದೆ 752 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 11,719 ಸಕ್ರಿಯ ಪ್ರಕರಣಗಳಿವೆ.

ಶನಿವಾರ ಜಿಲ್ಲೆಯಲ್ಲಿ 3 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 783ಕ್ಕೇರಿದೆ. ಮೃತಪಟ್ಟವರಲ್ಲಿ ಮಂಗಳೂರು ಮತ್ತು ಬಂಟ್ವಾಳದ ಮಹಿಳೆಯರು ಸೇರಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 7,75,602 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದ್ದು, ಆ ಪೈಕಿ 7,20,920 ಮಂದಿಯ ವರದಿ ನೆಗೆಟಿವ್ ಮತ್ತು 54,682 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಜಿಲ್ಲೆಯಲ್ಲಿ ಈವರೆಗೆ 42,180 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ ದ.ಕ.ಜಿಲ್ಲೆಯಲ್ಲಿ 52,519 ಪ್ರಕರಣ ದಾಖಲಿಸಲಾಗಿದೆ. 54,86,130 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಶನಿವಾರ 11 ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಘೋಷಿಸಲ್ಪಟ್ಟ ಕಂಟೈನ್ಮೆಂಟ್ ವಲಯ ಸಂಖ್ಯೆಯು 34ಕ್ಕೇರಿದೆ.

ಬಂಟ್ವಾಳದ ಒಂದೇ ಪ್ರದೇಶದಲ್ಲಿ ಏಳು, ಮಂಗಳೂರಿನಲ್ಲಿ ಎರಡು, ಬೆಳ್ತಂಗಡಿಯಲ್ಲಿ ಎರಡು ಕಂಟೈನ್ಮೆಂಟ್ ವಲಯವನ್ನು ಶನಿವಾರ ಘೋಷಿಸಲಾಗಿದೆ. ಬಂಟ್ವಾಳದ ಅಳಿಕೆಯ ಮನೆಯೊಂದರಲ್ಲಿ 7 ಮಂದಿಗೆ, ಅಮ್ಟೂರಿನ ಮನೆಯೊಂದರಲ್ಲಿ 6 ಮಂದಿಗೆ, ಬಂಟ್ವಾಳದ ಸಂಜಯ ಗಿರಿಯಲ್ಲಿ 6 ಮಂದಿಗೆ, ಬಿ.ಸಿ.ರೋಡ್‌ನ ಪಂಚಮಿಯಲ್ಲಿ 5 ಮಂದಿಗೆ, ಬಂಟ್ವಾಳ ಬೈಪಾಸ್ ರೋಡ್‌ನಲ್ಲಿ 6 ಮಂದಿಗೆ, ಬೆಳ್ತಂಗಡಿಯ ಶಿರ್ಲಾಲು ವಿನಲ್ಲಿ 6 ಮಂದಿಗೆ, ಶಿರ್ಲಾಲು ಕರಂಬಾರುವಿನಲ್ಲಿ 9 ಮಂದಿಗೆ, ಪುಂಜಾಲಕಟ್ಟೆಯ ಕಾರಬೆಟ್ಟುವಿನಲ್ಲಿ 10 ಮಂದಿಗೆ, ಸೋಮೇಶ್ವರದ ಮನೆ ಯೊಂದರಲ್ಲಿ 6 ಮಂದಿಗೆ, ದೇರಳಕಟ್ಟೆಯ ಶಾಂತಿಧಾಮದಲ್ಲಿ 6 ಮಂದಿಗೆ ಹಾಗೂ ಪಾಸಿಟಿವ್ ಬಂದಿರುವ ಕಾರಣ ಕಂಟೈನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ.

ಉಡುಪಿಯಲ್ಲಿ 1047 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-38916. ಶನಿವಾರದಂದು 328 ಮಂದಿ ಗುಣಮುಖರಾರಾಗಿದ್ದಾರೆ.  ಒಟ್ಟು 32730 ಮಂದಿ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ.  ಪ್ರಸ್ತುತ 5958 ಸಕ್ರೀಯ ಪ್ರಕರಣಗಳಿವೆ. ಮತ್ತೆ 10 ಮಂದಿ ಸೋಂಕಿಗೆ ಬಲಿದ್ದಾರೆ. ಇದುವರೆಗೆ ಒಟ್ಟು 228 ಮಂದಿ ಸಾವನ್ನಪ್ಪಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English