ದನದ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿಯ ಬಂಧನ

3:45 PM, Wednesday, May 12th, 2021
Share
1 Star2 Stars3 Stars4 Stars5 Stars
(No Ratings Yet)
Loading...

calfಕಾಪು : ಅಬ್ಬು ಮಹಮ್ಮದ್ ಎಂಬ ವ್ಯಕ್ತಿ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಸಮೀಪ ಅಕ್ರಮ‌‌ ಕಸಾಯಿಖಾನೆ ಮಾಡಿಕೊಂಡು ಪರಿಸರದ ದನದ ಕರುಗಳನ್ನು ಪಿಕ್ ಅಪ್ ವಾಹನದಲ್ಲಿ ಕದ್ದು ತಂದು ಮಾಂಸ ಮಾಡುತ್ತಿದ್ದ ವೇಳೆ  ದಾಳಿ ನಡೆಸಿದ ಕಾಪು ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ , ಮಹಮ್ಮದ್ ಅಜರುದ್ದೀನ್, ನವಾಜ್, ಮಹಮ್ಮದ್ ಹನೀಫ್ ಯಾನೆ ಆಸ್ಪಕ್ , ಮಹಮ್ಮದ್ ಇಸ್ಮಾಯಿಲ್, ಉಮ್ಮರಬ್ಬ ಎಂದು ಗುರುತಿಸಲಾಗಿದೆ. ಪರಾರಿಯಾದವರನ್ನು ಇಸ್ಮಾಯಿಲ್ , ರಪೀಕ್ , ಅಬ್ಬು ಮಹಮ್ಮದ್ ಎಂದು . ಗುರುತಿಸಲಾಗಿದೆ.

ಬಂಧಿತರಿಂದ ನಾಲ್ಕು ಕರುಗಳು, 30 ಕೆ.ಜಿ. ಮಾಂಸ, ಕಸಾಯಿಖಾನೆಯಲ್ಲಿ ಉಪಯೋಗಿಸುತ್ತಿದ್ದ ಚೂರಿ ಹಾಗೂ ಇತರ ಸಲಕರಣೆಗಳು, ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ 4,5,9,11, ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ 1964 , ಕಲಂ. 11(1)(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ -1960 ಹಾಗೂ ಮತ್ತು 269, 379 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English