ಪ್ರೀತಿಸಿ ಮದುವೆಯಾಟ ಆಡಿದ ಗಂಡು ಹರಿಶಿನ ಮೈ ಆರುವ ಮುನ್ನವೇ ಇನ್ನೊಂದು ಮದುವೆ ಹಸಮಣೆಗೆ!

12:29 AM, Thursday, May 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kolaraಕೋಲಾರ: ಪ್ರೀತಿಸಿ ಮದುವೆಯಾಟ ಆಡಿದ ಪತಿ ಮಹಾಶಯನೊಬ್ಬ ಅದರ ಬೆನ್ನಲ್ಲೇ ಇನ್ನೊಂದು ಪುನರ್ ವಿವಾಹಕ್ಕೆ ಮುಂದಾದ ವಿಚಿತ್ರ ಪ್ರಕರಣವೊಂದು ಇಲ್ಲಿದೆ. ಈ ಪ್ರಕರಣದಲ್ಲಿ ತನ್ನ ನೂತನ ಗಂಡನ ಹುಚ್ಚಾಟಕ್ಕೆ ಬೆಚ್ಚಿದ ನೂತನ ವಧು ಎಸ್ಪಿ ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತು ಪ್ರತಿಭಟಿಸಿದ ಮುಂದುವರೆದ ಭಾಗವೂ ಇದ್ದು, ಸಧ್ಯಕ್ಕೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಪಿಳ್ಳಪ್ಪನ ಮಗ ಮಹೇಶ್ ಅದೇ ಗ್ರಾಮದ ಮುನಿಯಪ್ಪನ ಮಗಳನ್ನು ಸುಮಾರು 4 ವರ್ಷಗಳ ಹಿಂದೆ ಮನೆಯಲ್ಲಿ ಯರೂ ಇಲ್ಲದ ಸಮಯ ನೋಡಿ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದನು ಎನ್ನಲಾಗಿದೆ. ಆನಂತರ ಅತ್ಯಾಚಾರ ವಿಷಯವನ್ನು ಯಾರಿಗೂ ಹೇಳದಿದ್ದಲ್ಲಿ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಬಂಪರ್ ಆಫರ್ ನೀಡಿರುತ್ತಾನೆ. ಹೇಗೋ ತನ್ನ ಜೀವನ ಹಾಳಾಗಿ ಹೋಯಿತೆಂದು ಆಕೆ ಆ ಆಫರ್ಗೆ ಒಪ್ಪಿಕೊಂಡಿರುತ್ತಾಳೆ.

ಅದನ್ನೇ ಸದರ ಮಾಡಿಕೊಂಡ ಆತ ಆಕೆ ಕೊಸರಾಡಿದಾಗ ಮದುವೆ ಆಗಬೇಕೋ ಬೇಡವೋ ಎಂದು ಬ್ಲಾಕ್ಮೇಲ್ ತಂತ್ರ ಪ್ರಯೋಗವನ್ನೂ ಒಡ್ಡಿ, ಸುಮಾರು 4 ವರ್ಷಗಳಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾನೆ ಎನ್ನಲಾಗಿದೆ. ಇದರೊಂದಿಗೆ ಆಕೆ ಖಾಸಗಿ ಕಂಪನಿ ಉದ್ಯೋಗಿನಿಯಾದ ಆಕೆಯ ಸಂಬಳಕ್ಕೂ, ಆಕೆಯ ಬಂಗಾರದ ಒಡವೆಗಳನ್ನೂ ಲೂಟಿ ಮಾಡಿದ್ದನೆನ್ನಲಾಗಿದೆ. ಒಂದೇ ಊಟ ತಿಂದು ಬೇಸತ್ತು ಏತನ್ಮಧ್ಯೆ ದೇವನಹಳ್ಳಿ ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಇನ್ನೊಬ್ಬ ಯುವತಿಯೊಡನೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡು ಬಂದ ನಂತರ ಅಸಲಿಯತ್ತು ಶುರುವಾಗಿದೆ.

ಆವರೆವಿಗೂ ಮದುವೆ ಮಾಡಿಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ಅವನ ಲೈಂಗಿಕ ದೌರ್ಜನ್ಯ, ಲೂಟಿಗಳನ್ನು ಸಹಿಸಿಕೊಂಡು ಬಂದಿದ್ದ ಆಕೆ ಮೇಲ್ಕಂಡ ವಿವಾಹ ನಿಶ್ಚಿತಾರ್ಥ ವಿಷಯ ತಿಳಿದುಬಂದ ಕೂಡಲೇ ಇಡೀ ವಿಷಯವನ್ನು ಮನೆಯಲ್ಲಿ ತಿಳಿಸಿದರು. ಕೋಲಾರ ಗ್ರಾಮಾಂತರ ಪೊಲೀಸರಿಗೆ ದೂರೂ ಹೋಯಿತು. ಪಂಚಾಯಿತಿಗಳೂ ನಡೆದವು. ಹುಡುಗನ ತಂದೆ ಹುಡುಗನನ್ನು ಪಂಚಾಯಿತಿಯಲ್ಲಿಯೇ ಹಿಡಿದುಕೊಂಡು ಹೊಡೆದ. ಹೀಗೆ ಗಲಾಟೆಯಲ್ಲಿ ಪಂಚಾಯಿತಿ ಇತ್ರ್ಯವಾಗಲಿಲ್ಲ.

ಆದರೆ, ಇತ್ತ ತನು-ಮನ-ಧನವನ್ನು ಕಳೆದುಕೊಂಡಿದ್ದ ಯುವತಿಯು ಬಸವತ್ತು ತನಗಾದ ಅನ್ಯಾಯದ ವಿರುದ್ಧ ಕೋಲಾರದ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಿದರು. ಆದರೆ ಮಾಮೂಲಿನಂತೆ ಇಲ್ಲಿನ ಪೊಲೀಸರು ಹುಡುಗನ ಕಡೆಯವರನ್ನು ಕರೆಯಿಸಿ, ಮಾತನಾಡಿಕೊಂಡು, ಅಲ್ಲಿಗೇ ಪ್ರಕರಣವನ್ನು ತುಂಡರಿಸಿಬಿಟ್ಟರು. ಆಗ ದಲಿತ ಪರ ಸಂಘಟನೆಗಳು ಪ್ರಕರಣದಲ್ಲಿ ಪ್ರವೇಶಿಸಿ ದೂರು ದಾಖಲಿಸುವಲ್ಲಿ ಯಶಸ್ವಿಯಾದವು. ಹುಡುಗನ ವಿರುದ್ಧ ಅತ್ಯಾಚಾರ ಹಾಗೂ ವಂಚನೆಯ ಆರೋಪ ದಾಖಲಾಯಿತು.

ಆದರೆ ಮೊನ್ನೆ ಭಾನುವಾರದಂದು ತನ್ನ ತಂದೆ-ತಾಯಿ, ಅಣ್ಣನೊಂದಿಗೆ ಹುಡುಗಿಯ ಮನೆಗೆ ಬಂದ ಮಹೇಶ್ ತನ್ನ ವಿರುದ್ಧ ದಾಖಲು ಮಾಡಿರುವ ಕೇಸ್ನ್ ಹಿಂತೆಗೆದುಕೊಂಡಲ್ಲಿ ಈಗಲೇ ತಾನು ಅವಳನ್ನು ಮದುವೆಯಾಗುವುದಾಗಿ, ಇಲ್ಲವೇ ಎಲ್ಲರನ್ನೂ ಕೊಂದು ತಾನು ಜೈಲಿಗೆ ಹೋಗುವುದಾಗಿ ತಾನು ತನ್ನೊಂದಿಗೆ ಚೀಲದಲ್ಲಿ ತಂದಿದ್ದ ಮಚ್ಚು ತೋರಿಸಿ ತನ್ನ ಅಂತಿಮ ನಿರ್ಧಾರ ವನ್ನು ಪ್ರಕಟಿಸಿಬಿಟ್ಟನು. ಅವನ ಮಾತಿಗೆ ಎಲ್ಲರೂ ಅವಕ್ಕಾದರು. ಬೆದರಿದ ಯುವತಿ ಅವನಿಂದ ಅರ್ಧಗಂಟೆಯಲ್ಲಿ ವೇಮಗಲ್ನಲ್ಲಿರುವ ಕಮ್ಮಗುಟ್ಟದಲ್ಲಿರುವ ದೇವಸ್ಥಾನದ ಮುಂದೆ ತಾಳಿ ಕಟ್ಟಲು ಕೊರಳೊಡ್ಡಿದಳು. ಮದುವೆಯ ನಂತರ ಕೆಲವು ಕಾಗದ ಪತ್ರಗಳಿಗೆ ಆಕೆಯ, ಆಕೆಯ ತಂದೆ-ತಾಯಿಯ ಸಹಿಗಳನ್ನು ಪಡೆದ ಮಹೇಶ್ ಅದೇ ದಿನ ಶೋಭನದಲ್ಲಿ ಆ ಯುವತಿಯನ್ನು ಕೊಲ್ಲಲು ಪ್ರಯತ್ನಿಸಿದನು! ಈಗ ಇನ್ನೊಂದಾಕೆಯೊಡನೆ ವಿವಾಹ ತಯ್ಯಾರಿ ನಡೆಸಿದ್ದಾನೆ.

ಆಕೆ ಕಿರಿಚಿಕೊಂಡ ಕೂಡಲೇ ಮಹೇಶ್, ಆತನ ಕುಟುಂಬದವರು ಕಾರಿನಲ್ಲಿ ಪರಾರಿಯಾದರು. ಈಗ ಆಕೆ ವೇಮಗಲ್ ಪೊಲೀಸರಿಗೆ, ಕೋಲಾರ ಗ್ರಾಮಾಂತರ ಪೊಲೀಸರಿಗೆ, ಕೋಲಾರ ಜಿಲ್ಲಾ ಎಸ್ಪಿಗೆ ದೂರುಗಳನ್ನು ನೀಡಿದ್ದಲ್ಲದೇ ಕೋಲಾರ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತು ಪ್ರತಿಭಟಿಸುತ್ತಿದ್ದಾಳೆ. ಈಗ ಕಾನೂನುಬದ್ಧವಾಗಿ ಈಕೆಯೇ ಮೊದಲನೇ ಪತ್ನಿ ಆದರೂ ಸಂಧಿಗ್ಧತೆಯನ್ನು ಎದುರಿಸುತ್ತಿದ್ದಾಳೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English