ಕೋವಿಡ್ ಎರಡನೇ ಅಲೆಗೆ ಪಬ್ಲಿಕ್ ಟಿವಿ ಕ್ಯಾಮಾರಾಮನ್ ಬಲಿ, 10 ಲಕ್ಷ ರೂ. ಪರಿಹಾರ ನೀಡಿದ ಆಡಳಿತ ಮಂಡಳಿ

12:11 PM, Thursday, May 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

Basavarajಚಿತ್ರದುರ್ಗ: ಕಳೆದ 5 ವರ್ಷಗಳಿಂದ  ಚಿತ್ರದುರ್ಗದಲ್ಲಿ ಪಬ್ಲಿಕ್ ಟಿವಿ ಕ್ಯಾಮಾರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಕೋಟಿ (43) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ ಎರಡನೇ ಅಲೆಗೆ ತುತ್ತಾಗಿ ಕಳೆದ ಹದಿನೈದು ದಿನಗಳಿಂದ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಮೃತ ಬಸವರಾಜ ಕೋಟಿ ಅವರಿಗೆ ಹತ್ತು ವರ್ಷದ ಓರ್ವ ಪುತ್ರ ಮತ್ತು ಹನ್ನೆರಡು ವರ್ಷದ ಖುಷಿ ಎಂಬ ಇಬ್ಬರು ಮಕ್ಕಳಿದ್ದರು, ಪತ್ನಿಯಾದ ಶಾಂತ ಸೇರಿದಂತೆ ಹೆತ್ತವರು ಹಾಗೂ ಅಪಾರ ಬಂಧಗಳನ್ನು ಅಗಲಿದ್ದಾರೆ.

ಮೃತ ಬಸವರಾಜ್ ಕುಟುಂಬಕ್ಕೆ ಪಬ್ಲಿಕ್ ಟಿವಿ ಆಡಳಿತ ಮಂಡಳಿ 10 ಲಕ್ಷ ರೂ. ಪರಿಹಾರ ಘೋಷಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English