ಬೆಂಗಳೂರು : ಪೋಷಕರು ಬದುಕಿದ್ದರೆ ನಿನ್ನ ಜೀವನಕ್ಕೆ ಒಳ್ಳೆಯದಾಗಲ್ಲ ಎಂದು ಭವಿಷ್ಯ ನುಡಿದಿದ್ದ ಆ ಜ್ಯೋತಿಷಿಯ ಮಾತು ಕೇಳಿ ಮಗನೇ ತಂದೆ-ತಾಯಿಯನ್ನು ಹತ್ಯೆ ಮಾಡಿದ ಘಟನೆ ಕರಿ ಹೋಬನಹಳ್ಳಿ ಎಂಬಲ್ಲಿ ನಡೆದಿದೆ.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕರಿ ಹೋಬನಹಳ್ಳಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕಿದ್ದ ಹನುಮಂತ ರಾಮ ಮತ್ತು ಪತ್ನಿ ಹೊನ್ನಮ್ಮ ಮಗನಿಂದಲೇ ಕೊಲೆಯಾದವರು.
ಕೊಲೆಯಾದ ದಂಪತಿಗಳಿಗೆ ಮೂವರು ಗಂಡು ಮಕ್ಕಳು, ಎರಡನೆಯವ ಹದಿನಾಲ್ಕರ ಹರೆಯದಲ್ಲೆ ಗಾಂಜಾ ಸೇವನೆಯ ಚಟಕ್ಕೆ ಬಿದ್ದಿದ್ದ, ಜ್ಯೋತಿಷಿಯೊಬ್ಬ ತಂದೆ ತಾಯಿಯಿಂದ ದೂರ ಇದ್ದರೆ ನಿನಗೆ ಒಳಿತು ಎಂದಿದ್ದ.
ಅದನ್ನೇ ತಲೆಯಲ್ಲಿ ಇಟ್ಟುಕೊಂಡಿದ್ದ ಬಾಲಕ ಗಾಂಜಾ ಸೇವನೆ ಮಾಡಬೇಡ ಎಂದು ಬುದ್ದಿವಾದ ಹೇಳಿದಕ್ಕೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ.
ಜ್ಯೋತಿಷಿಯ ಮಾತು ಕೇಳಿ ಕೊಲೆ ಮಾಡಿದ ಆ ಬಾಲಕ ಈಗ ಕಂಬಿ ಎಣಿಸುತ್ತಿದ್ದಾನೆ.
Click this button or press Ctrl+G to toggle between Kannada and English