ಕೇಂದ್ರದ ಪ್ಯಾಕೇಜ್ ಗಳನ್ನು ರಾಜ್ಯ ಸರ್ಕಾರ ಯಾಕೆ ನೀಡುತ್ತಿಲ್ಲ, ನಿಮ್ಮ ಮಂತ್ರಿಗಳು ಕತ್ತೆ ಕಾಯುತ್ತಿದ್ದಾರಾ? ಸದಾನಂದ ಗೌಡ

6:02 PM, Friday, May 14th, 2021
Share
1 Star2 Stars3 Stars4 Stars5 Stars
(No Ratings Yet)
Loading...

Sadananda Gowda Callಮಂಗಳೂರು : ಕೇರಳ, ಆಂಧ್ರದಲ್ಲಿ ಬಡವರಿಗೆ ಪ್ಯಾಕೇಜ್ ಘೋಷಣೆ ಆಗಿ, ಅದರ ಉಪಯೋಗವನ್ನು ಬಡವರು ಪಡೆದುಕೊಳ್ಳುತ್ತಿದ್ದಾರೆ, ಆದರೆ ಕರ್ನಾಟಕದಲ್ಲಿ ಪ್ಯಾಕೇಜ್ ಘೋಷಣೆ ಯಾಕೆ ಆಗಲಿಲ್ಲ? ದಯವಿಟ್ಟು ಬಡವರಿಗೆ ಪ್ಯಾಕೇಜ್ ಘೋಷಣೆ ಮಾಡಿ ಎಂದು ಮನವಿ ಮಾಡಿದಕ್ಕೆ ಕೇಂದ್ರ ಸಚಿವ ಸದಾನಂದ ಗೌಡರು ಕೇಂದ್ರದಿಂದ ಕೊಡಬೇಕಾದುದನ್ನೆಲ್ಲ ಕೊಟ್ಟಿದ್ದೇವೆ ರಾಜ್ಯದ ಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡದ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ರೈ ಎಂದು ಪರಿಚಯಿಸಿಕೊಂಡು ಪೋನ್ ಕರೆ ಮಾಡಿ ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು ಕೂಡ ಪ್ಯಾಕೇಜ್ ಯಾಕೆ ಘೋಷಣೆಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಕೇಂದ್ರದಿಂದ  ರೆಮ್‍ಡಿಸಿವಿರ್, ಆಕ್ಸಿಜನ್ ಸಮೇತ ಹಲವು ಪ್ಯಾಕೇಜ್ ಗಳನ್ನು ಕೇಂದ್ರ ಸರ್ಕಾರದಿಂದ  ಕೊಟ್ಟಿದ್ದೇವೆ. ಈ ಕುರಿತು ನಿಮ್ಮ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಅವರಿಗೆ ಪ್ರಶ್ನೆ ಮಾಡಿ, ಅವರನ್ನು ಸಂಪರ್ಕಿಸಿ ಅವರೊಂದಿಗೆ ಮಾತನಾಡಿ” ಎಂದಿದ್ದಾರೆ.

ಕೇಂದ್ರದಿಂದ ಕೊರೊನಾಗೆ ಬೇಕಾದ ಎಲ್ಲಾ ರೀತಿಯ ಪರಿಹಾರಗಳನ್ನು ರಾಜ್ಯ ಸರ್ಕಾರಗಳಿಗೆ ನೀಡುತ್ತಿದ್ದೇವೆ. ನಿಮ್ಮ ರಾಜ್ಯದ ನಾಯಕರು ಏನು ಮಾಡುತ್ತಿದ್ದಾರೆ, ಅವರೆಲ್ಲ ಕತ್ತೆ ಕಾಯಲು ಇರುವುದಾ ಎಂದು ಪ್ರಶ್ನಿಸಿದರು. ನೀವು ಮೊದಲಿಗೆ ಅವರನ್ನು ಸಂಪರ್ಕಿಸಿ ಮಾತನಾಡಿ. ಈ ಬಗ್ಗೆ ನಾನು ಕೂಡ ವಿಚಾರಣೆ ನಡೆಸುತ್ತೇನೆ” ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತನೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ತುಳುವಿನಲ್ಲಿ ಮಾತಾಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English