ಮಂಗಳೂರು : ಕೊರೊನಾ ವಾರಿಯರ್ ಆಗಿ ದ.ಕ ಜಿಲ್ಲೆಯಲ್ಲಿ ಕೆಲಸಮಾಡುತ್ತಿರುವ 89 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು , 51 ವರ್ಷದ ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ.
ಈ ಬಾರಿ ಪೊಲೀಸರ ಕುಟುಂಬ ಸದಸ್ಯರ ಹಲವು ಮಂದಿಗೆ ಸೋಂಕು ತಗುಲಿದ್ದು ಅವರ ಸುರಕ್ಷತೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಪೊಲೀಸ್ ಕೊವೀಡ್ ಕೇರ್ ಸೆಂಟರ್ ಆರಂಭಿಸಲಾಗಿದೆ.
ಕಮಿಷನರೆಟ್ ವ್ಯಾಪ್ತಿಯಲ್ಲಿ 1700 ಪೊಲೀಸರಿಗೆ 2 ನೇ ಡೋಸ್ ಕೂಡಾ ಶೇ. 95 ರಷ್ಟೂ ಪೂರ್ಣಗೊಂಡಿದೆ. ಹೆಚ್ಚಿನ ಪೊಲೀಸರಿಗೆ ಲಸಿಕೆ ನೀಡಿರುವುದರಿಂದ ಕೊರೊನಾದಿಂದ ಅಷ್ಟು ಆರೋಗ್ಯ ಹಾನಿ ಉಂಟಾಗದು ಎಂಬ ವಿಶ್ವಾಸವಿದೆ. ಪೊಲೀಸರು ದಿಅರ್ಯದಿಂದ ಕರ್ತವ್ಯ ನಿರ್ವಹಿಸಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English