ಕೊರೋನಾ ಸೋಂಕಿತ ಯುವಕನಿಗೆ ಕಲ್ಲಿನಿಂದ ಹೊಡೆದು ಗ್ರಾಮಬಿಟ್ಟು ಹೋಗುವಂತೆ ಬೆದರಿಕೆ

1:58 PM, Saturday, May 15th, 2021
Share
1 Star2 Stars3 Stars4 Stars5 Stars
(No Ratings Yet)
Loading...

Stoneಮೈಸೂರು: ಇತರರಿಗೂ ಸೋಂಕು ತಗಲುವ ಹಿನ್ನೆಲೆಯಲ್ಲಿ ಗ್ರಾಮಬಿಟ್ಟು ಹೋಗುವಂತೆ ಕೊರೋನಾ ಸೋಂಕಿತ ಯುವಕನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರಿನ ಕರಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪಂಚಾಯತ್ ಸದಸ್ಯರು ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು. ಆದರೆ, ಮನೆ ಬಳಿ ಕುಳಿತಿದ್ದ ಮುತ್ತೇ ಗೌಡ ಹಾಗೂ ಬಲರಾಮ್ ಎಂಬ ಕಿಡಿಕೇಡಿಗಳು ಗುಂಪು ಸೇರಿಸಿ ಸೋಂಕಿತನ ಮೇಲೆ ಏಕಾಏಕಿ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಅಲ್ಲದೆ, ಇತರೆ ಗ್ರಾಮದವರೂ ಕೂಡ ದಾಳಿ ಮಾಡುವಂತೆ ಪ್ರೇರೇಪಿಸಿದ್ದಾರೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಇತರರಿಗೂ ಸೋಂಕು ತಗಲುವ ಹಿನ್ನೆಲೆಯಲ್ಲಿ ಗ್ರಾಮಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾರೆ.

ಕಲ್ಲು ತೂರಾಟ ನಡೆಸಿದ ಪರಿಣಾಮ ಸೋಂಕಿತ ಯುವಕರನ ಬಲ ಮೊಣಕೈ ಮೂಳೆ ಮುರಿದಿದೆ. ರಕ್ತ ತೀವ್ರವಾಗಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಯುವಕನ ಪೋಷಕರು ಕೂಗಾಡಿದ್ದು, ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿದ್ದು, ಹೆಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ,

ಈ ಘಟನೆಯನ್ನು ದಾಳಿ ಬಳಿಕ ಸೋಂಕಿತ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನನಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ಮಾಹಿತಿ ತಿಳಿದ ಕೂಡಲೇ ದಾಳಿ ನಡೆಸಲು ಎದುರು ನೋಡುತ್ತಿದ್ದರು.

ದಾಳಿಯನ್ನು ಮುತ್ತೇಗೌಡ ಹಾಗೂ ಬಲರಾಮ್ ಮಾಡಿರುವುದಾಗಿ ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English