ಶ್ರೀವೇದವರ್ಧನತೀರ್ಥರೆಂದು ನಾಮಕರಣಗೊಂಡ ಶೀರೂರು ಮಠದ ಉತ್ತರಾಧಿಕಾರಿಗೆ ಪಟ್ಟಾಭಿಷೇಕ

12:03 PM, Saturday, May 15th, 2021
Share
1 Star2 Stars3 Stars4 Stars5 Stars
(No Ratings Yet)
Loading...

vedavardanaಉಡುಪಿ:  ಶೀರೂರು ಮಠದ ಉತ್ತರಾಧಿಕಾರಿಗಳಾಗಿ ಶ್ರೀವೇದವರ್ಧನತೀರ್ಥ ಶ್ರೀಪಾದರನ್ನು ದ್ವಂದ್ವ ಮಠವಾದ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ ನೇಮಿಸಿದರು.

ಗುರುವಾರ ಅನಿರುದ್ಧ ಸರಳತ್ತಾಯರಿಗೆ ಸನ್ಯಾಸಾಶ್ರಮ ಪ್ರವೇಶದ ವಿಧಿ ವಿಧಾನಗಳು ನಡೆದಿದ್ದವು.  ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಶುಕ್ರವಾರ ಶ್ರೀವೇದವರ್ಧನತೀರ್ಥರೆಂದು ನಾಮಕರಣ ಮಾಡಿ ಶೀರೂರು ಮಠದ ಉತ್ತರಾಧಿಕಾರಿಗಳಾಗಿ ಪಟ್ಟಾಭಿಷೇಕ ಮಾಡಿದರು.

ಶೀರೂರು ಮಠದ ದೇವರನ್ನು ಹರಿವಾಣದಲ್ಲಿಟ್ಟು ಹರಿವಾಣವನ್ನು ಶಿರದ ಮೇಲಿರಿಸಿ ಅಭಿಷೇಕ ಮಾಡಿದರು. ಇದೇ ಸಂದರ್ಭ ಪ್ರವಣ ಮಂತ್ರ ಮತ್ತಿತರ ಮಂತ್ರೋಪದೇಶ ನೀಡಿ ಹರಸಿದರು. ಪಟ್ಟಾಭಿಷೇಕದ ಸ್ಮರಣಾರ್ಥ ಉಭಯ ಶ್ರೀಗಳು ಎರಡು ಅಶ್ವತ್ಥದ ಸಸಿಗಳನ್ನು ನೆಟ್ಟರು.

ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ದೀಕ್ಷೆ ನೀಡಿದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ನೂತನ ಯತಿ ಶ್ರೀವೇದವರ್ಧನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ನೂತನ ಯತಿಗಳಿಂದ ಪರ್ಯಾಯ ಮಠಾಧೀಶರಿಗೆ, ಪರ್ಯಾಯ ಮಠಾಧೀಶರು ನೂತನ ಯತಿಗಳಿಗೆ ಗೌರವಾರ್ಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English