ಕೋಲಾರ : ಸೂಕ್ತ ಬೆಲೆ ಸಿಗದೇ,ಬೆಳೆಗಾರರು ನೂರಾರು ಬ್ಯಾಕ್ಸ್ ಟೊಮೆಟೋವನ್ನು ರಸ್ತೆ ಬದಿಯಲ್ಲೇ ಸುರಿದು ಹೋಗಿರುವ ಘಟನೆ ತಾಲೂಕಿನ ಎನ್.ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ನಡೆದಿದೆ.
ನೀರಿನ ಸಮಸ್ಯೆ ಮಧ್ಯೆಯೂ ಲಕ್ಷಾಂತರ ರೂ. ಖರ್ಚು ಮಾಡಿ ತಾಲೂಕಿನ ಯಲುವಹಳ್ಳಿ ಗ್ರಾಮದ ಟಿ.ಆರ್.ವೇಣುಗೋಪಾಲ್ 5ಎಕರೆ, ಶಂಕರ್ 1 ಎಕರೆ ಮತ್ತು ರಾಮಚಂದ್ರಪ್ಪ3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು ಕೋವಿಡ್ ಲಾಕ್‌ಡೌನ್ ಪರಿಣಾಮ ಬೆಲೆ ಪಾಳಕ್ಕೆ ಕುಸಿದ ಪರಿಣಾಮ ಬೆಳೆಗೆ ಬೆಲೆ ಇಲ್ಲದಾಗಿದೆ.
ಅವರು ಎರಡು ಮೂರು ದಿನಗಳಿಗೊಮ್ಮೆ750 ರಿಂದ 800 ಬಾಕ್ಸ್ ಟೊಮೆಟೋವನ್ನುಎನ್.ವಡ್ಡಹಳ್ಳಿ ಮಾರುಕಟ್ಟೆಗೆ ತರುತ್ತಿದ್ದರು. ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದನಂತರ ಬೆಲೆ ಪಾಳಕ್ಕೆ ಕುಸಿದಿದೆ.
ಸ್ಥಳೀಯ ಮಂಡಿಗಳಲ್ಲಿ ಪ್ರತಿ ಬಾಕ್ಸ್ ಟೊಮೆಟೋವನ್ನು20-30 ರೂ.ಗೆ ಖರೀದಿಸಲಾಗುತ್ತಿದೆ. ಇದರಿಂದ ರೈತರು ತಾವು ಹಾಕಿರುವ ಬಂಡವಾಳವೂ ಕೈಗೆ ಬರದಂತಾಗಿ ರಸ್ತೆ ಬದಿಯಲ್ಲೇಟೊಮೆಟೋ ಸುರಿದು ವಾಪಸ್ಸಾಗುತ್ತಿದ್ದಾರೆ. ಆಲಂಗೂರು, ಅನಹಳ್ಳಿ, ಪುಂಗನೂರು ರಸ್ತೆಬದಿಯಲ್ಲಿ ಬೆಳೆಗಾರರು ರಾಶಿ ಗಟ್ಟಲೆಟೊಮೆಟೋ ಸುರಿಯುತ್ತಿರುವ ದೃಶ್ಯ ಮನಕಲಕುವಂತಿದೆ.
Click this button or press Ctrl+G to toggle between Kannada and English