ಟೌಟೆ ಚಂಡಮಾರುತಕ್ಕೆ ಸಿಲುಕಿದವರ ರಕ್ಷಣೆ ಕಾರ್ಯಾಚರಣೆ ಜಾರಿ: ಸಚಿವ ಆರ್ ಅಶೋಕ್ ಮಾಹಿತಿ*

1:39 PM, Monday, May 17th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

R Ashoka ಬೆಂಗಳೂರು : ಟೌಟೆ ಚಂಡಮಾರುತ ಹಿನ್ನೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ನೀಡಿದ್ದಾಗಲೂ ದಡ ಸೇರದ ಎಂ ಆರ್ ಪಿ ಎಲ್ ಅಂಡರ್ ವಾಟರ್ ಏಜೆನ್ಸಿಯ ಅಲಯನ್ಸ್ ಟಗ್ ನಲ್ಲಿದ್ದ 8 ಜನರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಉಳಿದ ಇಬ್ಬರ ಮೃತದೇಹ ಸಿಕ್ಕಿದ್ದು, ಮೂವರು ಈಜಿ ದಡ ಸೇರಿದ್ದಾರೆ. ಟಗ್ ನ ಅವಶೇಷಗಳು ಪಡುಬಿದ್ರೆ ಬೀಚ್ ಬಳಿ ಪತ್ತೆಯಾಗಿವೆ, ಎಂದು ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಖಾರದ ಉಪಾಧ್ಯಕ್ಷರಾದ ಆರ್ ಅಶೋಕ್ ತಿಳಿಸಿದ್ದಾರೆ.

ಈ ಕುರಿತಂತೆ ವಿವರಗಳನ್ನ ನೀಡಿದ ಆರ್ ಅಶೋಕ್ ಅವರು ,” ಹವಾಮಾನ ಇಲಾಖೆಯಿಂದ ಮೇ 13ಕ್ಕೆ ಮುನ್ಸೂಚನೆ ಸಿಕ್ಕಿತ್ತು. ಹೀಗಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಯಾರಿಗೂ ಕಡಲಿಗೆ ಇಳಿಂiÀiದಂತೆ ಹಾಗೂ ಕಡಲಿನಲ್ಲಿದ್ದವರು ದಡ ಸೇರುವಂತೆ ಸೂಚಿಸಿತ್ತು. ಹವಾಮಾನ ವೈಪರೀತ್ಯದ ಕುರಿತು ಮಾಹಿತಿಯನ್ನ ಟಗ್ ಗೆ ನೀಡಲಾಗಿದ್ದರೂ ಅವರು ಹಿಂತಿರುಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಈ ಕುರಿತಂತೆ ಕಾರಣ ತಿಳಿದು ಬಂದಿಲ್ಲ. ಮೇ 15ರಂದು ಅವರು ಹಿಂತಿರುಗುವ ವೇಳೆ ಸಂಪರ್ಕ ಕಡಿತಗೊಂಡಿತ್ತು. ಆ ನಂತರ ಹವಾಮಾನ ವೈಪರೀತ್ಯದ ಪರಿಣಾಮ ಬೋಟ್ ಮುಗುಚಿ ಈ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ದಡಕ್ಕೆ ಸೇರಿದ ಅವಶೇಷಗಳ ಕ್ಯಾಬಿನ್ ನಲ್ಲಿ ಯಾರಾದರು ಸಿಲುಕಿರುವ ಸಾಧ್ಯತೆ ಇದೆಯಾ ಎಂಬ ಕುರಿತಂತೆಯೂ ಎಂ ಆರ್ ಪಿ ಎಲ್ ತಂಡ ಪರಿಶೀಲನೆ ನಡೆಸುತ್ತಿದೆ”, ಎಂದು ತಿಳಿಸಿದರು.

ಹಾಗೆಯೇ ಕೊರಮಂಡಲ್ ಎಂಬ ಟಗ್ ನಲ್ಲಿಯೂ ಕೂಡಾ 9 ಜನ ಸಿಲುಕಿಕೊಂಡಿದ್ದಾರೆ. ಈ ಕಂಪನಿಯ ಗುತ್ತಿಗೆ ಆರು ತಿಂಗಳಿನ ಹಿಂದೆಯೇ ಅವಧಿ ಮುಗಿದಿದ್ದರೂ ಅವರು ಎನ್ ಎಂ ಪಿಟಿಯಲ್ಲಿ ಉಳಿದುಕೊಂಡಿದ್ದರ ಕುರಿತು ವರದಿ ಸಲ್ಲಿಸಲು ತಿಳಿಸಿದ್ದೇನೆ. ಮುಲ್ಕಿ ರಾಕ್ಸ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇವರನ್ನ ಐಎನ್ ಎಸ್ ವರಹ ಇವರನ್ನ ನಿರಂತರ ಇವರ ಮೇಲೆ ನಿಗಾ ಇಟ್ಟಿದೆ. ಅಲೆಗಳ ವೇಗ 5 ಮೀಟರ್ ಗಿಂತಲೂ ಹೆಚ್ಚಿದ್ದು, ಪ್ರತಿಕೂಲ ವಾತಾವರಣ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ. ರಾಜ್ಯ ಸರ್ಕಾರವು ನೌಕಾಪಡೆಯ ಹೆಲೆಕಾಪ್ಟರ್ ಗಳ ಮೂಲಕ ರಕ್ಷಿಸಲು ಪ್ರಯತ್ನ ಮಾಡುತ್ತಿದೆ. ಹವಾಮಾನ ಪರಿಸ್ಥಿತಿ ಅನುಕೂಲವಾದರೆ ರಕ್ಷಣಾ ಕಾರ್ಯ ಮಾಡಲಾಗುವುದು. ಅವರಲ್ಲಿ ಆಹಾರ, ನೀರು ಸಂಗ್ರಹಣೆ ಇದೆ ಎಂಬ ಮಾಹಿತಿಯಿದೆ. ಮಾಹಿತಿ ನೀಡಿದ್ದಾಗಲೂ ಅವರು ಅಲ್ಲೇ ಯಾಕೆ ಉಳಿದುಕೊಂಡಿದ್ದರು ಎಂಬುದರ ಕುರಿತು ಪರಿಶೀಲನೆ ಮಾಡಲಾಗುತ್ತಿದೆ. ಸಧ್ಯ ಜೀವ ರಕ್ಷಣೆಯ ಕಾರ್ಯ ಪ್ರಮುಖವಾಗಿರುವುದರಿಂದ ಜಿಲ್ಲಾಡಳಿತ, ಕಂದಾಯ ಇಲಾಖೆ, ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಕಾರ್ಯಾಚರಣೆ ಕುರಿತಂತೆ ಚರ್ಚೆನಡೆಸುತ್ತಿದೆ”, ಎಂದು ಹೇಳಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English