ಎಚ್ಚರಿಕೆ ನೀಡಿದ್ದಾಗಲೂ ಟಗ್ ಬೋಟ್ ಹಿಂದಿರುಗದ ಕುರಿತಂತೆ ತನಿಖೆಗೆ ಆದೇಶ

9:47 PM, Monday, May 17th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

R Ashoka ಮಂಗಳೂರು : ಟೌಟೆ ಚಂಡಮಾರುತದ ಕುರಿತಂತೆ ಉಂಟಾಗಲಿರುವ ಹವಾಮಾನ ವೈಪರೀತ್ಯದ ಕುರಿತು ಜಿಲ್ಲಾ ಆಡಳಿತವು ನಿರಂತರ ಮುನ್ನೆಚ್ಚರಿಕೆ ನೀಡಿದ್ದಾಗಲೂ ದಡಕ್ಕೆ ಹಿಂದಿರುಗದ ಟಗ್ ಬೋಟ್ ಗಳ ನಿರ್ಧಾರದ ಕುರಿತಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಸೋಮವಾರ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಆರ್ ಅಶೋಕ ಅವರು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಟಗ್ ಬೋಟ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ರೂ. 10 ಲಕ್ಷ ಪರಿಹಾರ ಧನ ನೀಡುವಂತೆ ಆದೇಶಿಸಿದ್ದಾರೆ. ಹಾಗೆಯೇ ಚಂಡಮಾರುತದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ರೂ. 5 ಲಕ್ಷ ಪರಿಹಾರ ಧನ ಘೋಷಿಸಿದರು. ಭಾಗಶಃ ಹಾನಿಗೊಳಗಾದ ಮನೆಗಳಿಗೆ ರೂ. 1 ಲಕ್ಷ ಹಾಗೂ ಚಂಡಮಾರುತದಿಂದ ಸಣ್ಣ ಪುಟ್ಟ ನಷ್ಟ ಅನುಭವಿಸಿದ 182 ಕುಟುಂಬಗಳಿಗೆ ರೂ.10 ಸಾವಿರ ಪರಿಹಾರ ಘೋಷಿಸಿದ್ದಾರೆ.

R Ashoka ಇದಕ್ಕೂ ಮೊದಲು ನವ ಮಂಗಳೂರು ಬಂದರಿನಲ್ಲಿ ಕೋರಮಂಡಲ್ ಟಗ್ ಬೋಟ್ ನಿಂದ ರಕ್ಷಿಸಲ್ಪಟ್ಟ ಸದಸ್ಯರನ್ನ ಬೇಟಿಯಾದ ಸಚಿವ ಆರ್ ಅಶೋಕ ಅವರು ಯಶಸ್ವಿಯಾಗಿ ರಕ್ಷಣಾ ಕಾರ್ಯ ಕೈಗೊಂಡ ಕೈಗೊಂಡ ಭಾರತೀಯ ಕರಾವಳಿ ರಕ್ಷಣಾ ಪಡೆ, ಪಶ್ಚಿಮ ನೌಕಾ ಪಡೆ ಹಾಗೂ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದರು.

ಈ ರಕ್ಷಣಾ ಕಾರ್ಯದಲ್ಲಿ ಟಗ್ ಬೋಟ್ ನಲ್ಲಿದ್ದ ನಾಲ್ವರನ್ನ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದ್ದು, ನಾಲ್ವರನ್ನ ಬೋಟ್ ಮೂಲಕ ರಕ್ಷಿಸಲಾಗಿದೆ. ಈ ಟಗ್ ಬೋಟ್ ಬಂದರು ವ್ಯಾಪ್ತಿಯಿಂದ ದೂರಕ್ಕೆ ಕೊಚ್ಚಿಕೊಂಡು ಹೋಗಿ ಬಂಡೆಗಳ ನಡುವೆ ಸಿಲುಕಿ ಹಾಕಿಕೊಂಡಿತ್ತು. ಹವಾಮಾನ ವೈಪರಿತ್ಯದ ಕಾರಣ ಐಸಿಜಿಎಸ್ ವರಾಹ ಟಗ್ ಬೋಟ್ ಬಳಿ ತೆರಳಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಗ್ಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಕೊಚ್ಚಿಯಿಂದ ಆಗಮಿಸಿದ ಐ ಎನ್ ಎಸ್ ಗರುಡಾ ಹೆಲಿಕಾಪ್ಟರ್ ಮೂಲಕ ಟಗ್ ಬೋಟ್ ನಲ್ಲಿ ಸಿಕ್ಕಿ ಹಾಕಿಕೊಂಡ ನಾಲ್ವರನ್ನ ರಕ್ಷಣೆ ಮಾಡಲಾಯಿತು. ಮಗಳೂರು ವಿಮಾನ ನಿಲ್ದಾಣದಲ್ಲಿ ಬೋಟ್ ನಿಂದ ರಕ್ಷಿಸಿದವರಿಗೆ ತುರ್ತು ಚಿಕಿತ್ಸೆಯನ್ನ ನೀಡಲಾಯಿತು.

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English