ಮಂಗಳೂರು : ದಕ್ಷಿಣ ಕನ್ನಡ ಪೊಲೀಸ್ ಠಾಣೆಯಲ್ಲಿ ಪ್ರೊಬೇಷನರಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ 24 ವರ್ಷದ ಶಾಮಿಲಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.
ಕೋಲಾರ ಮೂಲದ ಶಾಮಿಲಿ ದಕ್ಷಿಣ ಕನ್ನಡ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದು 7 ತಿಂಗಳ ಗರ್ಭಿಣಿ ಯಾಗಿದ್ದರು. ಅತಿ ಸಣ್ಣ ವಯಸ್ಸಿನ ಶಾಮಿಲಿ ಮಾರಕ ಕೊರೋನಾ ಗೆ ಬಲಿಯಾಗಿದ್ದಾರೆ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
ಶಾಮಿಲಿ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ಕನ್ನಡ ಸೂಪರಿಂಡೆಂಟ್ ರಿಷಿಕೇಶ್ ಸೋನಾವಾನೆ ಟ್ವೀಟ್ ಮಾಡಿದ್ದಾರೆ.
ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಅವರಿಗೆ ಲಸಿಕೆ ನೀಡಿರಲಿಲ್ಲ, ಜನವರಿ 11, 2011 ರಂದು ಶಾಮಿಲಿ ಕೆಲಸಕ್ಕೆ ಸೇರಿದ್ದರು. ತಮ್ಮ ತವರು ಕೋಲಾರಕ್ಕೆ ರಜೆ ಮೇಲೆ ತೆರಳಿದ್ದರು. ಮೇ 2 ರಂದು ಕೋವಿಡ್ ನಿಂದಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಆಕೆಯ ಆಸ್ಪತ್ರೆ ಖರ್ಚು ವೆಚ್ಚಗಳನ್ನು ಕೋಲಾರ ಎಸ್ ಪಿ ನೀಡಿದ್ದಾರೆ.
Click this button or press Ctrl+G to toggle between Kannada and English