ಮಂಗಳೂರು: ಶನಿವಾರ ಬೆಳಗ್ಗೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಿದ ಸಿಂಗಲ್ ಪಾಯಿಂಟ್ ಮೂರಿಂಗ್ ತೇಲುಜೆಟ್ಟಿ ತೆರವುಗೊಳಿಸುವ ಪ್ರಯತ್ನಗಳು ಮಂಗಳವಾರ ಆರಂಭಗೊಂಡಿವೆ. ಈ ಅವಘಡದಲ್ಲಿ ಮೂವರು ಬದುಕಿ ಬಂದಿದ್ದರೆ ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನೂ ಮೂವರು ನೀರು ಪಾಲಾಗಿದ್ದು ಇದುವರೆಗೆ ಸಿಕ್ಕಿಲ್ಲ.
ಅದರ ಮದ್ಯೆ ಪಡುಬಿದ್ರಿ ಬಳಿ ಕಡಲಲ್ಲಿ ಮಗುಚಿ ಬಿದ್ದ ಟಗ್ ಅಲಯನ್ಸ್‌ನ್ನು ತೆರವುಗೊಳಿಸುವ ಪ್ರಯತ್ನಗಳು ಮಂಗಳವಾರ ಆರಂಭಗೊಂಡಿವೆ. ನೌಕೆಯ ಮಾಲೀಕರಾದ ಅಂಡರ್‌ವಾಟರ್ ಸರ್ವಿಸಸ್‌ನವರು ಕಾರ್ಯಾಚರಣೆ ನಡೆಸುತ್ತಿದ್ದು ಎಂಆರ್‌ಪಿಎಲ್ ಉಸ್ತುವಾರಿ ವಹಿಸಿದೆ.
ಸೋಮವಾರ ಪ್ರಯತ್ನಗಳು ನಡೆದರೂ ಹವಾಮಾನ ವೈಪರೀತ್ಯದಿಂದ ಆಗಿರಲಿಲ್ಲ. ಟಗ್‌ನ ಆಂಕರಿಂಗ್ ಮಾಡುವ ಕೆಲಸ ಸೋಮವಾರವೇ ಆಗಿದೆ. ಅಲೆಗಳ ಅಬ್ಬರ ಇಳಿಯದೆ ಕಾರ್ಯಾಚರಣೆ ನಡೆಸುವುದು ಕಷ್ಟ, ಮಂಗಳವಾರ ಪ್ರಯತ್ನಗಳು ಸಾಗುತ್ತಿದ್ದು ಕೈಗೂಡುವ ಸಾಧ್ಯತೆ ಇದೆ ಎಂದು ಎಂಆರ್‌ಪಿಎಲ್ ಮೂಲಗಳು ತಿಳಿಸಿವೆ.
ಎಂಆರ್‌ಪಿಎಲ್‌ನವರ ಸಿಂಗಲ್ ಪಾಯಿಂಟ್ ಮೂರಿಂಗ್ ತೇಲುಜೆಟ್ಟಿ ನಿರ್ವಹಣೆ ಮಾಡುತ್ತಿದ್ದ8 ಮಂದಿಯ ತಂಡವನ್ನು ಹೊಂದಿದ್ದ ಈ ಟಗ್ ಶನಿವಾರ ಬೆಳಗ್ಗೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಿತ್ತು.
Click this button or press Ctrl+G to toggle between Kannada and English