ಮಂಗಳೂರು : ನಗರದ ಮಂಗಳಾದೇವಿ ದೇವಸ್ಥಾನದ ಬಳಿಯ ಪೆಟ್ರೋಲ್ ಪಂಪ್ ಎದುರುಗಡೆ ನಿಲ್ಲಿಸಿದ್ದ ಖಾಸಗಿ ಬಸ್ಸೊಂದು ಸೋಮವಾರ ತಡರಾತ್ರಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
ಮಂಗಳೂರು- ಸುರತ್ಕಲ್ ಸಂಚಾರ ನಡೆಸುತ್ತಿದ್ದ ರೂಟ್ ನಂಬ್ರ 15ರ ರಾಜಲಕ್ಷ್ಮಿ ಹೆಸರಿನ ಖಾಸಗಿ ಬಸ್ಸು ಬೆಂಕಿಗಾಹುತಿಯಾಗಿದೆ. ಬಸ್ಸನ್ನು ಇತ್ತೀಚೆಗೆ ಲಾಕ್ಡೌನ್ ಘೋಷಣೆಯಾದ ಬಳಿಕ ಒಂದೇ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಅಲ್ಲಿ ಅದೇ ಸಂಸ್ಥೆಗೆ ಸೇರಿದ ಇತರ ಮೂರ್ನಾಲ್ಕು ಬಸ್ ಗಳು ನಿಂತಿದ್ದವು. ಆದರೆ, ಒಂದು ಬಸ್ ಮಾತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಘಟನೆ ಬಗ್ಗೆ ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಯಾರೋ ಕಿಡಿಗೇಡಿಗಳ ಕೃತ್ಯ ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇಲ್ಲ. ತುಂಬಾ ದಿನಗಳಿಂದ ಒಂದೇ ಕಡೆ ಬಸ್ ನಿಂತಿದ್ದರೆ ಬ್ಯಾಟರಿ ವೀಕ್ ಆಗುವ ಸಾಧ್ಯತೆ ಇದೆ. ಪವರ್ ಇಲ್ಲದೆ ಶಾರ್ಟ್ ಸರ್ಕಿಟ್ ಆಗಲಿಕ್ಕಿಲ್ಲ. ಇದು ಯಾರೋ ರಾತ್ರಿ ಬಸ್ಸಿನಲ್ಲಿ ಒಳಗೆ ಬಂದು ಕುಳಿತವರು ಉದ್ದೇಶಪೂರ್ವಕ ವಾಗಿ ಕೃತ್ಯ ನಡೆಸಿರಬಹುದು ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English