ಕೋವಿಡ್ ರೋಗಿಯ ಮೃತದೇಹ ಇಟ್ಟು 5.23 ಲಕ್ಷ ರೂ. ಬಿಲ್ ಕೇಳಿದ ಮಂಗಳೂರಿನ ಇಂದಿರಾ ಆಸ್ಪತ್ರೆ

9:41 PM, Tuesday, May 18th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

indira-hospitalಮಂಗಳೂರು : ಕೋವಿಡ್ ನಂತಹ ಮಾರಣಾಂತಿಕ ಸಾಂಕ್ರಾಮಿಕ ರೋಗಬಂದಾಗಲೂ ಬಡವರಿಂದ ಕಿತ್ತು ತಿನ್ನುವ ಆಸ್ಪತೆಗಳು ನಮ್ಮ ನಗರದಲ್ಲಿ ತಲೆ ಎತ್ತಿವೆ.  ಸಾಂಕ್ರಾಮಿಕ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಬೇಕಾದ ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುವ ದೈತ್ಯ ಲೂಟಿಕೋರ ಕೇಂದ್ರಗಳಾಗಿ ಬೆಳೆದಿವೆ. ಈ ಸುಲಿಗೆ ಕೋರರನ್ನು ಕೇಳುವವರೇ ಇಲ್ಲ. ಜನ ಲಾಕ್ ಡೌನ್ ನಿಂದ ಊಟಕ್ಕೂ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಇವರಿಗೆ ಬಡವರ ಹೆಣವನ್ನಿಟ್ಟು ವ್ಯಾಪಾರ ಮಾಡುವುದೇ ಕಾಯಕ.

ನಗರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್ ರೋಗಿಯ ಮೃತದೇಹ ಬಿಟ್ಟು ಕೊಡಲು 5.23 ಲಕ್ಷ ರೂ. ಬಿಲ್ ಮಾಡಿದ ಘಟನೆ ನಡೆದಿದೆ.

ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ 30 ವರ್ಷದ ಯುವಕನಿಗೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ನಗರದ ಇಂದಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಆಸ್ಪತ್ರೆಗೆ ದಾಖಲಾಗುವ ವೇಳೆ 50 ಸಾವಿರ ರೂ‌. ಪಾವತಿಸಲಾಗಿದೆ.

ಕಳೆದ ಹತ್ತು ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದು, ಯುವಕ ಮೃತನಾಗಿದ್ದು ಕುಟುಂಬಸ್ಥರಿಗೆ ಅವರ ಮುಖವನ್ನು ನೋಡಲು ಬಿಟ್ಟಿಲ್ಲ ಎಂದು ಆರೋಪಿಸಲಾಗಿದೆ.

ಮೆಡಿಕಲ್ ಬಿಲ್ ಎಂದು 2.75 ಲಕ್ಷ ರೂ. ಪಾವತಿಸಲಾಗಿದೆ. ಅಲ್ಲದೆ  ಸೋಂಕಿತನ ಮೃತದೇಹ ಕೊಡಬೇಕಾದರೆ 5 ಲಕ್ಷ ರೂ. ವರೆಗೆ ಪಾವತಿಸಲು ಆಸ್ಪತ್ರೆ ಹೇಳಿದೆ. ಆದ್ದರಿಂದ ದ.ಕ.ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಅವರು ತಕ್ಷಣ ಜಿಲ್ಲೆಯ ಆರೋಗ್ಯ ಅಧಿಕಾರಿ, ನೋಡಲ್ ಅಧಿಕಾರಿಗೆ ತಿಳಿಸಿ ಈ ಬಗ್ಗೆ ಸಮಸ್ಯೆ ಬಗೆಹರಿಸಲು ತಿಳಿಸಿದ್ದಾರೆ.

ತಕ್ಷಣ ನೋಡಲ್ ಅಧಿಕಾರಿ ಡಾ.ರತ್ನಾಕರ್ ಹಾಗೂ ಅವರ ತಂಡ, ಕದ್ರಿ ಪೊಲೀಸ್ ಇನ್ಸ್‌ಪೆಕ್ಟರ್ ಸವಿತಾತೇಜ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ‌. ಬಳಿಕ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿ ಬಿಲ್‌ನ 1 ಲಕ್ಷ ರೂ. ಗೆ ಇಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೃತರೋಗಿಯು ಕೋವಿಡ್ನಿಂದ ಮೃತಪಟ್ಟಿದ್ದಲ್ಲ, ಬದಲಾಗಿ ಆಸ್ಪತ್ರೆಯವರ ನಿರ್ಲಕ್ಷ್ಯದಿಂದ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.  ಸೋಂಕಿತ ಮೃತಪಡುವುದಕ್ಕೆ ಹಾಗೂ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಮೀರಿ ಬಿಲ್ ಪಾವತಿಸುವ ಬಗ್ಗೆಯೂ ಕಾನೂನು ಹೋರಾಟ ನಡೆಸುವುದಾಗಿ ಮೃತ ವ್ಯಕ್ತಿಯ ಆಪ್ತರು ತಿಳಿಸಿದ್ದಾರೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English