ಲಾಕ್ ಡೌನ್ : ಅನಗತ್ಯ ಅಂಗಡಿ ತೆರೆದ ಮಾಲೀಕರ ವಿರುದ್ಧ ಕ್ರಮ ಕೈ ಗೊಂಡ ಉಡುಪಿ ಡಿಸಿ

3:56 PM, Wednesday, May 19th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Shops ಉಡುಪಿ : ಲಾಕ್ ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಿರುವ ಮಾಹಿತಿ ಆಧಾರ ಮೇಲೆ ಮೇ 19 ರ ಬುಧವಾರ ನಗರ ಹಾಗೂ ಮಲ್ಪೆ ಪ್ರದೇಶದಲ್ಲಿ ಧಿಡೀರ್ ದಾಳಿ ನಡೆಸಿದ ಡಿಸಿ ಜಿ.ಜಗದೀಶ್ ಹಲವು ಅಂಗಡಿ ಮಾಲಕರಿಗೆ ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಜನರು ಹತ್ತಿರದ ಕಿರಾಣಿ ಮತ್ತು ತರಕಾರಿ ಅಂಗಡಿಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಬೇಕು ಎಂದು ಅವರು ಎಚ್ಚರಿಸಿದರು. ಇದಲ್ಲದೆ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವವರ ಕಠಿಣ ಎಚ್ಚರಿಕೆ ನೀಡಿದ ಅವರು ವಾಹನಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದರು.

ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಇತರೆ ವಸ್ತುಗಳನ್ನು ಮಾರಾಟಮಾಡುತ್ತಿದ್ದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲಾಕ್‌ಡೌನ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅವರು ಪೊಲೀಸರಿಗೆ ಸೂಚನೆ ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English