ಮಂಗಳೂರು : ಇದೊಂದು ಕೊರೋನಾ ಜೊತೆಗೇನೆ ಬರುವ ಖಾಯಿಲೆಯಾಗಿದ್ದು, ಕೊರೊನಾ ಪೀಡಿತರಲ್ಲಿ ಮತ್ತು ಸೋಂಕಿಗೆ ತುತ್ತಾಗಿ ಗುಣಮುಖರಾಗುತ್ತಿರುವವರಲ್ಲಿ ಬ್ಯ್ಲಾಕ್ ಫಂಗಸ್ ಅತಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.
ಬ್ಯ್ಲಾಕ್ ಫಂಗಸ್ ಭಾದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈವರೆಗೆ 6 ಮಂದಿಯಲ್ಲಿ ಕಾಣಿಸಿಕೊಂಡಿದೆ . ಶಂಕಿತ ಬ್ಯ್ಲಾಕ್ ಫಂಗಸ್ ಗೆ ತುತ್ತಾದ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿಈಗಾಗಲೇ ಮೃತಪಟ್ಟಿದ್ದಾರೆ. ಸದ್ಯ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂವರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರಿನ ವೆನ್ಲಾಕ್ ನಲ್ಲೂ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ, ಈ ಕಾಯಿಲೆಯ ಚಿಕಿತ್ಸೆಗೆ ಬರುವ ರೋಗಿಗಳನ್ನು ಚಿಕಿತ್ಸಾ ಸಮರ್ಥ್ಯ ಹೊಂದಿರುವ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿ ವಾಪಾಸ್ ಕಳುಹಿಸುವಂತಿಲ್ಲ.
Click this button or press Ctrl+G to toggle between Kannada and English