ಚರ್ಚ್‌ನಲ್ಲಿ ಕೋವಿಡ್‌ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ನಡೆಯುತ್ತಿದೆ : ಶೋಭಾ ಕರಂದ್ಲಾಜೆ

9:07 PM, Wednesday, May 19th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

shobha karandlaje ಚಿಕ್ಕಮಗಳೂರು : ಮೂಡಿಗೆರೆಯ ಆಲ್ದೂರಿನ ಕೆಲ ಚರ್ಚುಗಳಲ್ಲಿ ಕೋವಿಡ್‌ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಮತಾಂತರಗೊಂಡವರು ಚರ್ಚಿಗೆ ಹೋದಾಗ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರು, ಏಕೆ ಹೀಗೆ ಹೇಳುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ಚರ್ಚ್‌ನವರೇ ವ್ಯಾಕ್ಸಿನ್‌ ತೆಗೆದುಕೊಳ್ತಾರೆ. ಆದರೆ ಜನರಿಗೆ ತೆಗೆದುಕೊಳ್ಳಬೇಡಿ ಎಂದು ತಪ್ಪು ಸಂದೇಶ ನೀಡ್ತಾರೆ.

ಇತ್ತೀಚೆಗೆ ಬಂದ ಪ್ರಾಟೆಸ್ಟೆಂಟ್, ಸೆಂಥಕೋಸ್ಟ್ ಚರ್ಚ್‌ಗಳಿಂದ ಅಪಪ್ರಚಾರ ನಡೆಯುತ್ತಿದೆ. ಅವರ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಇನ್ನು ಇಡೀ ಜಗತ್ತು ಕೊರೊನಾವು ಚೀನಾ ವೈರಸ್ ಎಂದು ಹೇಳುತ್ತಿದ್ದರೂ ಕಾಂಗ್ರೆಸ್  ಮಾತ್ರ  ಇಂಡಿಯಾ ವೈರಸ್, ಮೋದಿ ವೈರಸ್ ಎಂದು ಹೇಳಿ ದೇಶಕ್ಕೆ ಅಮಾನಿಸ್ತಿದ್ದಾರೆ” ಎಂದರು.

ವೋಟ್ ಬ್ಯಾಂಕ್ ರಾಜಕಾರಣ, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಮಾಡೋಣ ಈಗ ದೇಶದಲ್ಲಿ ಯುದ್ಧದ ಸಂದರ್ಭಲ್ಲಿ ಇಂತಹಾ ಸಂದರ್ಭದಲ್ಲಿ ರಾಜಕಾರಣ ಸರಿಯಲ್ಲ. ಚೀನಾವೇ ನಮ್ಮ ವೈರಿ ದೇಶ, ಕಾಂಗ್ರೆಸ್‌ನವರು ಚೀನಾವನ್ನೇ ಮೀರಿಸುವ ರೀತಿ ಮಾತನಾಡ್ತಿದ್ದಾರೆ. ದೇಶ, ವ್ಯಾಕ್ಸಿನ್, ಮೋದಿ ವೈರಸ್, ಇಂಡಿಯಾ ವೈರಸ್ ಎಂದು ಹೇಳುವವರ ವಿರುದ್ಧ ಕೇಸ ದಾಖಲಿಸಬೇಕು” ಎಂದು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English