ಪ್ರಿಯತಮೆಗೆ ಮುತ್ತಿಟ್ಟ ಫೋಟೋ ವಾಟ್ಸಾಪ್ ಸ್ಟೇಟಸ್ಗೆ ಹಾಕಿ, ಕೊಲೆಯಾದ ಪ್ರಿಯಕರ

2:00 PM, Thursday, May 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

basava Shetty ಚಾಮರಾಜನಗರ : ಅಕ್ರಮ ಸಂಭಂದ ಇಟ್ಟುಕೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ಗಂಡ ಇಲ್ಲದಾಗ  ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ, ಮುತ್ತಿಟ್ಟ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಗೂ ಹಾಕಿದ್ದ. ಆತನ ಸ್ಟೇಟಸ್ ನೋಡಿದ ಪತಿ ಈ ಅಕ್ರಮ ಸಂಬಂಧವನ್ನು ಕೊಲೆಯಲ್ಲಿ ಅಂತ್ಯಗೊಳಿಸಿದ್ದಾನೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘನೆ ನಡೆದಿದೆ.

ತನ್ನ ಮನೆಯಲ್ಲಿ ಪತ್ನಿ ಸೌಭಾಗ್ಯ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿ(37)ಯನ್ನು ಕಂಡ ಪತಿ ಶಿವಣ್ಣ ಕೊಲೆ ಮಾಡಿದ್ದಾನೆ.

ಸೌಭಾಗ್ಯ ಮತ್ತು ಬಸವಶೆಟ್ಟಿ ನಡುವೆ ಹಲವು ದಿನಗಳಿಂದ ಅಕ್ರಮ ಸಂಬಂಧ ಇತ್ತು. ಈ ವಿಷಯ ಪತಿ ಶಿವಣ್ಣಗೆ ತಿಳಿಯಿತು. ಪ್ರಿಯಕರ ಮತ್ತು ಪತ್ನಿ ಚುಂಬಿಸಿದ ಫೋಟೋವನ್ನೂ ಶಿವಣ್ಣ ನೋಡಿದ.

ಭಾನುವಾರ ರಾತ್ರಿ ಮನೆಗೆ ಹೋದಾಗ ಅಲ್ಲಿ ಪತ್ನಿ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿಯನ್ನು ಕೊಂದಿದ್ದಾನೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English