ಶೋಭಾ ಕರಂದ್ಲಾಜೆಯ ಪ್ರಜಾಪ್ರಭುತ್ವದ ಸದಸ್ಯತ್ವದಿಂದ ರದ್ದು ಮಾಡಬೇಕು : ಐವನ್ ಡಿ ಸೋಜ

4:08 PM, Thursday, May 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

ivanಮಂಗಳೂರು : ದೇಶದ ಲೋಕಸಭೆಗೆ ಶೋಭಾ ಕರಂದ್ಲಾಜೆಯಂತಹ ಸಂಸದರು ಆಯ್ಕೆಯಾಗಿರುವುದು ಪ್ರಜಾಪ್ರಭುತ್ವದ ಒಂದು ದೊಡ್ಡ ದುರಂತ,  ಇಂತಹವರನ್ನು ಪ್ರಜಾಪ್ರಭುತ್ವದ ಸದಸ್ಯತ್ವದಿಂದ ರದ್ದು ಮಾಡಬೇಕು. ತಮ್ಮ ಸ್ವಾರ್ಥಕ್ಕಾಗಿ ಒಂದು ಸಮುದಾಯವನ್ನೇ ಬಲಿತೆಗೆದುಕೊಂಡು, ಸುಳ್ಳು ಹೇಳಿಕೆಗಳನ್ನು ನೀಡಿರುವುದು ಪ್ರಜಾಪ್ರಭುತ್ವದಲ್ಲಿ ಇದೊಂದು ಕಪ್ಪು ಚುಕ್ಕೆ  ಎಂದು ಐವನ್ ಡಿ ಸೋಜ ತಿಳಿಸಿದರು.

ಶೋಭಾ ಕರಂದ್ಲಾಜೆ ಕ್ರೈಸ್ತ ಸಮಾಜಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಕಮಿಷನರಿಗೆ, ಉಪಪೋಲಿಸ್ ಆಯುಕ್ತ(ಡಿಸಿಪಿ)ರಾದ ಹರಿರಾಮ್ ಶಂಕರ್, ಇವರಿಗೆ ದೂರು  ನೀಡಲಾಯಿತು ಮತ್ತು ಕೂಡಲೇ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಡಿಸಿಪಿಯವರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅದೇ ರೀತಿ ಪಾಂಡೇಶ್ವರ ಪೋಲಿಸ್ ಠಾಣೆಗೂ ತೆರಳಿ, ಪೋಲಿಸ್ ಇನ್ಸ್ಪೆಕ್ಟರಿಗೆ ದೂರನ್ನು ಸಲ್ಲಿಸಲಾಯಿತು. ದೂರನ್ನು ಸ್ವೀಕರಿಸಿದ ಪೋಲಿಸರು ಕೂಡಲೇ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ.

ನಾಳೆನೇ 10,000 ಮಂದಿ ಕ್ರೈಸ್ತ  ಸಮುದಾಯಕ್ಕೆ, ತನ್ನ ಕಚೇರಿಯ ಮುಂದೇನೆ ಲಸಿಕೆ ನೀಡಲು ಜನ ಕರೆದುಕೊಂಡು ಬರುವುದಾಗಿ, ಮತ್ತು ಲಸಿಕೆಯನ್ನು ಪೂರೈಸುವಂತೆ  ಶೋಭಾ ಕರಂದ್ಲಾಜೆಯವರಿಗೆ  ಸವಾಲು ಹಾಕಿದರು. ಈ ಸಮಾರಂಭದಲ್ಲಿ ಅನೇಕ ಕ್ರೈಸ್ತ ನಾಯಕರುಗಳು ಶ್ರೀ ಐವನ್ ಡಿ ಸೋಜರವರ ಜೊತೆ ಉಪಸ್ಥಿತರಿದ್ದರು.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English